ADVERTISEMENT

ಕಾರ್ತಿ ಚಿದಂಬರಂ ವಿರುದ್ಧ ಇ.ಡಿ ಪ್ರಕರಣ ದಾಖಲು

ಪಿಟಿಐ
Published 19 ಮೇ 2017, 20:06 IST
Last Updated 19 ಮೇ 2017, 20:06 IST

ನವದೆಹಲಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ ಅವರ ಪುತ್ರ  ಕಾರ್ತಿ  ವಿರುದ್ಧ ಜಾರಿ ನಿರ್ದೇಶನಾಲಯ ಶುಕ್ರವಾರ ಪ್ರಕರಣ ದಾಖಲಿಸಿದೆ.

ಇತ್ತೀಚೆಗೆ ಸಿಬಿಐ ಕಾರ್ತಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ ಬಳಿಕ ಜಾರಿ ನಿರ್ದೇಶನಾಲಯ ಈ ಕ್ರಮಕೈಗೊಂಡಿದೆ.

ಕಾರ್ತಿ, ಇಂದ್ರಾಣಿ ಮತ್ತು ಪೀಟರ್‌ ಮುಖರ್ಜಿ, ಚೆಸ್‌ ಮ್ಯಾನೇಜ್‌ಮೆಂಟ್‌ ಸರ್ವಿಸಸ್‌ (ಕಾರ್ತಿ ಮಾಲೀಕತ್ವದ ಸಂಸ್ಥೆ),  ಅಡ್ವಾಂಟೇಜ್‌ ಸ್ಟ್ರಾಟೆಜೀಸ್‌ ಕನ್ಸಲ್ಟಿಂಗ್‌ ಕಂಪೆನಿ ವಿರುದ್ಧ ಸಿಬಿಐ  ಪ್ರಕರಣ ದಾಖಲಿಸಿತ್ತು.

ADVERTISEMENT

ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಎನ್‌ಎಕ್ಸ್‌ ಮಿಡಿಯಾ ವತಿಯಿಂದ ಅಕ್ರಮವಾಗಿ ಹಣ ಪಾವತಿಸಿದ ಬಗ್ಗೆ ಜಾರಿ ನಿರ್ದೇಶನಾಲಯ ಸಿಬಿಐಗೆ ಮಾಹಿತಿ ನೀಡಿತ್ತು.
ಈ ಮಾಹಿತಿ ಆಧರಿಸಿ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.