ADVERTISEMENT

ಕಾರ್ಯರೂಪಕ್ಕೆ ಬರದ ಎಟಿಎಂ ಬಳಕೆ ಮಿತಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2014, 11:40 IST
Last Updated 2 ನವೆಂಬರ್ 2014, 11:40 IST

ನವದೆಹಲಿ(ಪಿಟಿಐ): ಭಾರತೀಯ ರಿಸರ್ವ ಬ್ಯಾಂಕ್ (ಆರ್ ಬಿಐ) ದೇಶದ ಪ್ರಮುಖ ಆರು ಮಹಾನಗರಗಳಲ್ಲಿ ನ. 1ರಿಂದ ಗ್ರಾಹಕರು ತಮ್ಮದೇ ಬ್ಯಾಂಕಿನ ಎಟಿಎಂ ಮೂಲಕ ಹಣಕಾಸು ವ್ಯವಹಾರ ನಡೆಸುವ ಮಿತಿಯನ್ನು 5ಕ್ಕೆ ಸೀಮಿತಗೊಳಿಸಿದೆ. ಆದರೆ, ಎಸ್ ಬಿಐ, ಐಸಿಐಸಿಐ, ಎಚ್ ಡಿಎಫ್ ಸಿ ಮತ್ತು ಆ್ಯಕ್ಸಿಸ್ ಬ್ಯಾಂಕ್ ಗಳು ಈ ಬಗ್ಗೆ ಯಾವುದೇ ಪ್ರಕಟಣೆ ನೀಡಿಲ್ಲ.

ಗ್ರಾಹಕರು ತಮ್ಮದೇ ಬ್ಯಾಂಕಿನ ಎಟಿಎಂನಿಂದ ತಿಂಗಳೊಂದಕ್ಕೆ ಐದಕ್ಕಿಂತ ಹೆಚ್ಚು ಬಾರಿ ನಡೆಸುವ ಪ್ರತಿಯೊಂದು ವಹಿವಾಟಿಗೂ ರೂ 20 ಶುಲ್ಕ ತೆರ ಬೇಕಾಗುತ್ತದೆ. ಆರ್ ಬಿಐ ಈ ಹೊಸ ನಿಯಮವನ್ನು ರೂಪಿಸಿದ್ದು, ಇದು ನಗದು ಹಾಗೂ ಖಾತೆಯ ಮಾಹಿತಿ ಪಡೆಯುವ ವ್ಯವಹಾರಗಳಿಗೂ ಅನ್ವಯಿಸುತ್ತದೆ.

ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈ, ಕೋಲ್ಕತ್ತ ಮತ್ತು ಹೈದರಾಬಾದ್ ನಗರಳಲ್ಲಿ ಗ್ರಾಹಕರು ತಮ್ಮದೇ ಬ್ಯಾಂಕಿನ ಎಟಿಎಂಗಳಲ್ಲಿ ತಿಂಗಳೊಂದಕ್ಕೆ ಮಾಡಬಹುದಾದ ಉಚಿವ ವ್ಯವಹಾರಗಳ ಸಂಖ್ಯೆಯನ್ನು ಐದಕ್ಕೆ ಸೀಮಿತಗೊಳಿಸಲಾಗಿದೆ. ಬೇರೆ ಬ್ಯಾಂಕ್ ಎಟಿಎಂ ಬಳಕೆ ಮಾಡುವ ಸಂಖ್ಯೆಯನ್ನು ಐದರಿಂದ ಮೂರಕ್ಕೆ ಇಳಿಸಲಾಗಿದೆ.

ಗ್ರಾಹಕ ತಮ್ಮದೇ ಬ್ಯಾಂಕ್ ನ ಎಟಿಎಂ ನಿಂದ ಐದು ಬಾರಿ, ಇತರ ಬ್ಯಾಂಕ್ ನಿಂದ ಮೂರು ಬಾರಿ ಸೇರಿದಂತೆ ಒಟ್ಟಾರೆ ಎಂಟು ಬಾರಿ ಉಚಿತವಾಗಿ ವ್ಯಹರಿಸಬಹುದಾಗಿದೆ. ನಂತರದ ಪ್ರತಿ ವ್ಯವಹಾರಕ್ಕೆ ರೂ 20 ಶುಲ್ಕ ತೆರಬೇಕಾಗುತ್ತದೆ.

ಮೂರು ಉಚಿತ ವಹಿವಾಟಿನ ನಿರ್ಬಂಧವು ಮಹಾನಗರಗಳಲ್ಲಿನ ಸಣ್ಣ ಅಥವಾ ಸಾಮಾನ್ಯ ಉಳಿತಾಯ ಖಾತೆ ಹೊಂದಿರುವವರಿಗೆ, ನೋ ಫ್ರಿಲ್ ಖಾತೆ ಗ್ರಾಹಕರಿಗೆ ಅನ್ವಯಿಸುವುದಿಲ್ಲ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT