ADVERTISEMENT

ಕೊಳವೆಬಾವಿಗೆ ಬಾಲಕಿ: ಕಾರ್ಯಾಚರಣೆ ಚುರುಕು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2014, 20:03 IST
Last Updated 5 ಏಪ್ರಿಲ್ 2014, 20:03 IST

ಚೆನ್ನೈ(ಪಿಟಿಐ): ಮೂರು ವರ್ಷದ ಬಾಲಕಿಯೊಬ್ಬಳು ತೆರೆದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ತಮಿಳು ನಾಡಿನ ವೆಲ್ಲುಪುರಂ ಜಿಲ್ಲೆಯ ಥೈಗದುರ್ಗಂ ಎಂಬಲ್ಲಿ ಶುಕ್ರವಾರ ನಡೆದಿದೆ. ಬಾಲಕಿಯನ್ನು ರಕ್ಷಿಸಲು ಕಾರ್ಯಾಚರಣೆ ಬಿರುಸಿನಿಂದ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಪಲ್ಲಗಸೆರೈ ಎಂಬಲ್ಲಿನ ರಾಮ ಚಂದ್ರನ್‌ ಎಂಬುವವರ ಪುತ್ರಿ ಮಧು ಮಿತ್ರ ಎಂಬ ಬಾಲಕಿ ಕೊಳವೆಬಾವಿ ಸಮೀಪದಲ್ಲೇ ಆಟವಾಡುತ್ತಿದ್ದಾಗ ಆಕ ಸ್ಮಿಕವಾಗಿ ಬಿದ್ದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿ ಜೀವಂತವಾಗಿರುವ ಸಾಧ್ಯತೆ ಇರುವುದರಿಂದ ಕೊಳವೆ ಬಾವಿಗೆ ಸಮೀ ಪದಲ್ಲೇ ಮತ್ತೊಂದು ಗುಂಡಿ ತೋಡ ಲಾಗುತ್ತಿದೆ. ಈ ಕಾರ್ಯದಲ್ಲಿ ಅಗ್ನಿ ಮತ್ತು ರಕ್ಷಣಾ ಸಿಬ್ಬಂದಿ ತೊಡಗಿದ್ದಾರೆ. ಬಾಲಕಿ 500 ಅಡಿ ಉದ್ದದ ಕೊಳವೆ ಬಾವಿಯ 28 ರಿಂದ 30 ಅಡಿಯಲ್ಲಿ ಸಿಲುಕಿರಬಹುದು ಎನ್ನಲಾಗುತ್ತಿದೆ.

ADVERTISEMENT

ಕೊಳವೆ ಬಾವಿ ಒಳಗೆ ಆಮ್ಲಜನಕ ಪೂರೈಸಲಾಗುತ್ತಿದ್ದು ಉಸಿರಾಟಕ್ಕೆ ಅನು ಕೂಲ ಮಾಡಿಕೊಡಲಾಗಿದೆ. ತುರ್ತು ವೈದ್ಯಕೀಯ ತಂಡವನ್ನು ಅಂಬುಲೆನ್ಸ್‌ ಜತೆಯಲ್ಲಿ ಸನ್ನದ್ಧವಾಗಿಟ್ಟು ಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.