ADVERTISEMENT

ಗುತ್ತಿಗೆದಾರರಿಂದ ತೆರಿಗೆ ವಂಚನೆ: ಸಿವಿಸಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2014, 19:30 IST
Last Updated 25 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ): ಆದಾಯದಲ್ಲಿ ಸೋರಿಕೆಯಾಗುತ್ತಿ­ದೆಯೇ ಎಂಬುದನ್ನು  ತಿಳಿದುಕೊಳ್ಳಲು ಸರ್ಕಾರಿ ಗುತ್ತಿಗೆ­ದಾ­ರರು ಅಥವಾ ಪೂರೈಕೆದಾರರ ತೆರಿಗೆ ಪಾವತಿ ವಿವರಗಳನ್ನು ಸಮರ್ಪಕವಾಗಿ ಪರಿಶೀಲಿಸಬೇಕು ಎಂದು ಕೇಂದ್ರ ವಿಚಕ್ಷಣಾ ಆಯೋಗ (ಸಿವಿಸಿ) ಸೂಚಿಸಿದೆ.

ಪ್ರಾಕೃತಿಕ ವಿಕೋಪ ಮತ್ತು ತುರ್ತು ಪರಿಸ್ಥಿತಿಯಂತಹ ಅನಿವಾರ್ಯ ಸನ್ನಿವೇಶಗಳನ್ನು ಹೊರತುಪಡಿಸಿ ಒಂದೇ ಟೆಂಡರ್‌ ಅಥವಾ ನಾಮನಿರ್ದೇಶನದ ಆಧಾರದಲ್ಲಿ ಗುತ್ತಿಗೆ­ಗಳನ್ನು ನೀಡುವ ಪದ್ಧತಿಯನ್ನು ಅನುಸರಿಸುವಂತಿಲ್ಲ ಎಂದು ಸಿವಿಸಿ ಕೇಂದ್ರದ ಎಲ್ಲಾ ಸಚಿವಾಲಯ ಮತ್ತು ಇಲಾಖೆಗಳಿಗೆ ಕಳುಹಿಸಿರುವ ನೂತನ ಮಾರ್ಗದರ್ಶಿ ಸೂತ್ರದಲ್ಲಿ ನಿರ್ದೇಶಿಸಿದೆ.‘ಗುತ್ತಿಗೆ ವಲಯದಲ್ಲಿನ ತೆರಿಗೆ ವಂಚನೆ ಕಳವಳಕಾರಿ ಸಂಗತಿ. ಹೀಗಾಗಿ ಗುತ್ತಿಗೆದಾರರು ಅಥವಾ ಪೂರೈಕೆದಾರರ ತೆರಿಗೆ ಪಾವತಿಯನ್ನು ಸೂಕ್ತವಾಗಿ ಪರಿಶೀಲಿಸುವುದು ಅತ್ಯಗತ್ಯ’ ಎಂದು ಸಿವಿಸಿ ಹೇಳಿದೆ.

ಗುತ್ತಿಗೆ ಒಪ್ಪಂದದ ನಿಯಮಾವಳಿಗಳಿಗೆ ಅನುಗುಣವಾಗಿ ಕಡ್ಡಾಯ ತೆರಿಗೆ ಪಾವತಿ ಮತ್ತು ಕರ್ತವ್ಯ ನಿರ್ವಹಣೆ ಹೊಣೆಯನ್ನು ನಿಭಾಯಿಸುವಂತೆ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.