ADVERTISEMENT

ಗುಲಾಬಿ ಹಬ್ಬಕ್ಕೆ ಚಾಲನೆ

ಪಿಟಿಐ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST
ಗುಲಾಬಿ ತೋಟದ ದೃಶ್ಯ
ಗುಲಾಬಿ ತೋಟದ ದೃಶ್ಯ   

ನವದೆಹಲಿ : ಏಷ್ಯಾದ ಅತೀ ದೊಡ್ಡ ಗುಲಾಬಿ ತೋಟ ಎಂದು ಖ್ಯಾತಿ ಹೊಂದಿರುವ ಚಂಡಿಗಡದ ಝಾಕೀರ್ ಹುಸೇನ್‌ ತೋಟದಲ್ಲಿ ಶುಕ್ರವಾರ 46ನೇ ಗುಲಾಬಿ ಹಬ್ಬಕ್ಕೆ ಚಾಲನೆ ನೀಡಲಾಯಿತು.‌

30 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ತೋಟದಲ್ಲಿ 829 ಬಗೆಯ ಗುಲಾಬಿಗಳಿವೆ. ಲೀಸರ್‌ ಕಣಿವೆಯಲ್ಲಿ ಖ್ಯಾತ ಗಾಯಕರಾದ ಕುಲ್‌ವಿಂದರ್‌ ಬಿಲ್ಲಾ, ಅಂಕಿತ್‌ ತಿವಾರಿ ಅವರ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಸಲದ ಹಬ್ಬದಿಂದ ₹55 ಲಕ್ಷ  ಆದಾಯ ಬರುವ ನಿರೀಕ್ಷೆಯಿದೆ. ಇದೇ 25ಕ್ಕೆ ಹಬ್ಬ ಕೊನೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT