ADVERTISEMENT

ಜಾಮ್ ನಗರ ಬಳಿ ‘ಮಿಗ್‌21’ ವಿಮಾನ ಪತನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2015, 11:26 IST
Last Updated 31 ಜನವರಿ 2015, 11:26 IST

ಜಾಮ್ ನಗರ (ಪಿಟಿಐ): ಗುಜರಾತ್‌ನ ಜಾಮ್‌ನಗರ ಜಿಲ್ಲೆಯ ಬೆದ್‌ ಗ್ರಾಮದ ಸಮೀಪ ಭಾರತೀಯ ವಾಯು ಸೇನೆಗೆ ಸೇರಿದ ‘ಮಿಗ್‌21’ ಯುದ್ಧ ವಿಮಾನ ಶನಿವಾರ ಪತನಗೊಂಡಿದೆ.

‘ಜಾಮ್‌ನಗರದಿಂದ ಸುಮಾರು 20 ಕಿ.ಮೀ ದೂರದ ರಸೂಲ್‌ನಗರ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ವಿಮಾನದ ಪೈಲಟ್‌ ಸುರಕ್ಷಿತವಾಗಿ ಪಾರಾಗಿದ್ದಾರೆ’ ಎಂದು ಜಾಮ್‌ನಗರ ಜಿಲ್ಲಾ ಪೊಲೀಸ್‌ ವರಿಷ್ಠಧಿಕಾರಿ ನೀರಜ್‌ ಬದ್ಗುಜಾರ್‌ ತಿಳಿಸಿದ್ದಾರೆ.

‘ಸಮುದ್ರದ ನೀರಿನಲ್ಲಿ ಬಿದ್ದ ಪೈಲಟ್‌ ಅವರನ್ನು ಸೇನೆಯ ಹೆಲಿಕಾಪ್ಟರ್‌ ನೆರವಿನಿಂದ ರಕ್ಷಿಸಲಾಗಿದೆ. ಅಗ್ನಿಶಾಮಕ ಪಡೆಗಳು ಘಟನಾ ಸ್ಥಳಕ್ಕೆ ತೆರೆಳಿವೆ’ ಎಂದು ನೀರಜ್‌ ಹೇಳಿದ್ದಾರೆ.

ADVERTISEMENT

ಇದೇ ಪ್ರದೇಶದ ಬೆದ್‌ ಮತ್ತು ಸಮರ್ತ್‌ ಗ್ರಾಮಗಳ ಸಮೀಪ 2012ರಲ್ಲಿ ಎರಡು ಸೇನಾ ಹೆಲಿಕಾಪ್ಟರ್‌ಗಳು ಪತನಗೊಂಡು ಒಂಬತ್ತು ಮಂದಿ ಸಾವನ್ನಪ್ಪಿದ್ದರು. ‘ಮಿಗ್‌27’ ಸೇನಾ ವಿಮಾನವೊಂದು ರಾಜಸ್ತಾನದ ಬಾರ್ಮೆರ್‌ ಜಿಲ್ಲೆಯಲ್ಲಿ ಕಳೆದ ಗುರುವಾರದಂದು ಪತನಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.