ADVERTISEMENT

ಜೂನ್‌ 15ರಿಂದ ಉಚಿತ ರೋಮಿಂಗ್‌

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಯೋಜನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2015, 19:30 IST
Last Updated 2 ಜೂನ್ 2015, 19:30 IST

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಜೂನ್‌ 15ರಿಂದ ತನ್ನ ಚಂದಾದಾರರಿಗೆ ದೇಶಾದ್ಯಂತ ಉಚಿತ ರೋಮಿಂಗ್‌ ಸೌಲಭ್ಯ ಕಲ್ಪಿಸಲಿದೆ.

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 1 ವರ್ಷ ಪೂರೈಸಿದ ಸಂಬಂಧ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ದೂರಸಂಪರ್ಕ ಸಚಿವ ರವಿಶಂಕರ್‌ ಪ್ರಸಾದ್‌ ಈ ವಿಷಯ ತಿಳಿಸಿದರು. ಈ ವರ್ಷದ ಜುಲೈನಲ್ಲಿ ಸಂಪೂರ್ಣ ಮೊಬೈಲ್‌ ಪೋರ್ಟಬಿಲಿಟಿ (ಸೇವಾದಾತ ಕಂಪೆನಿಗಳು ಬದಲಾದರೂ ಮೊಬೈಲ್‌ ಸಂಖ್ಯೆ ಬದಲಾಗದ ಸೌಲಭ್ಯ ) ಜಾರಿಯಲ್ಲಿ ಬರಲಿದ್ದು ಅದಕ್ಕೆ ಮುನ್ನ ಈ ಪ್ರಕಟಣೆ ಹೊರಬಿದ್ದಿದೆ.  ಬಿಎಸ್‌ಎನ್‌ಎಲ್‌ ಮಾರ್ಚ್‌ ಅಂತ್ಯದ ವೇಳೆ 7.72 ಕೋಟಿ ಚಂದಾದಾರನ್ನು ಹೊಂದಿದೆ.

ಕಾಲ್ ಡ್ರಾಪ್‌ ಕಿರಿಕಿರಿ
ಗ್ರಾಹಕರು ಮಾತನಾಡುತ್ತಿರುವಾಗಲೇ ಕರೆ ಸ್ಥಗಿತಗೊಳ್ಳುವ ‘ಕಾಲ್‌ ಡ್ರಾಪ್‌’ ಕಿರಿಕಿರಿಯನ್ನು ತಗ್ಗಿಸುವಂತೆ ಸಚಿವ ರವಿಶಂಕರ್‌ ಪ್ರಸಾದ್‌ ಖಾಸಗಿ ಮೊಬೈಲ್‌ ಕಂಪೆನಿಗಳಿಗೆ ಸೂಚಿಸಿದ್ದಾರೆ.

ಬಿಎಸ್‌ಎನ್‌ಎಲ್‌ 15,000 ಮೊಬೈಲ್‌ ಗೋಪುರಗಳನ್ನು ಸ್ಥಾಪಿಸಿದ್ದು ಇದರಿಂದಾಗಿ ಕಾಲ್‌ ಡ್ರಾಪ್‌ ಕಿರಿಕಿರಿ ಕಡಿಮೆಯಾಗಿದೆ. ಖಾಸಗಿ ಮೊಬೈಲ್‌ ಕಂಪೆನಿಗಳೂ ‘ಕಾಲ್‌ ಡ್ರಾಪ್‌’ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ದಂಡ ವಿಧಿಸುವ ಸಾಧ್ಯತೆ ಇದೆ ಎಂದೂ ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT