ADVERTISEMENT

ದೆಹಲಿಯಲ್ಲಿ 15 ದಿನ ಮ್ಯಾಗಿ ನಿಷೇಧ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 12:57 IST
Last Updated 3 ಜೂನ್ 2015, 12:57 IST

ನವದೆಹಲಿ (ಪಿಟಿಐ): ನೆಸ್ಲೆ ಕಂಪೆನಿಯ ಸಿದ್ಧಆಹಾರ ಉತ್ಪನ್ನ ಮ್ಯಾಗಿ ನೂಡಲ್ಸ್‌ನ ಮಾರಾಟವನ್ನು ದೆಹಲಿ ಸರ್ಕಾರ 15 ದಿನಗಳ ಮಟ್ಟಿಗೆ ನಿಷೇಧಿಸಿದೆ.

ಮ್ಯಾಗಿ ನೂಡಲ್ಸ್‌ನಲ್ಲಿ ಅಪಾಯಕಾರಿ ಮೋನೊಸೋಡಿಯಂ ಗ್ಲುಟಮೇಟ್ ಮತ್ತು ಸೀಸದ ಅಂಶ ಪತ್ತೆಯಾಗಿದೆ ಎಂಬ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಸರ್ಕಾರ ಈ ನಿಷೇಧ ಆದೇಶ ಹೊರಡಿಸಿದೆ.

‘ಹೊಸದಾಗಿ ಬಂದಿರುವ ಮ್ಯಾಗಿ ನೂಡಲ್ಸ್‌ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗುವುದು. ಪ್ರಯೋಗಾಲಯದ ವರದಿಯನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ತಿಳಿಸಿದ್ದಾರೆ.

ADVERTISEMENT

‘ದೆಹಲಿಯಲ್ಲಿ ಮಾರಾಟವಾಗುತ್ತಿರುವ ಇತರೆ ಕಂಪೆನಿಗಳ ನೂಡಲ್ಸ್‌ ಮಾದರಿಗಳನ್ನು ಸಹ ಪರೀಕ್ಷೆಗೆ ಕಳಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.