ADVERTISEMENT

ದೌಲಾ ಕ್ವಾನ್‌ ಅತ್ಯಾಚಾರ: ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 10:36 IST
Last Updated 20 ಅಕ್ಟೋಬರ್ 2014, 10:36 IST

ನವದೆಹಲಿ (ಐಎಎನ್‌ಎಸ್‌): ಕಾಲ್‌ಸೆಂಟರ್‌ ಉದ್ಯೋಗಿ ದೌಲಾ ಕ್ವಾನ್‌ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣದ ಐವರು ಅಪರಾಧಿಗಳಿಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ.

ದೆಹಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿರೇಂದರ್‌ ಭಟ್‌ ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ಒಬ್ಬರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿ ಶಿಕ್ಷೆ ಪ್ರಮಾಣವನ್ನು ಸೋಮವಾರ  ಪ್ರಕಟಿಸಿದರು.

2010ರ ಆಕ್ಟೋಬರ್‌ 4ರಂದು ಕಾಲ್‌ಸೆಂಟರ್‌ ಉದ್ಯೋಗಿಯಾಗಿದ್ದ ದೌಲಾ ಕ್ವಾನ್‌ ಎಂಬ 30ರ ಹರೆಯದ ಯುವತಿಯನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದರು.

ಶಂಷಾದ್‌ ಅಲಿಯಾಸ್‌ ಖುಟುಕನ್‌, ಉಸ್ಮಾನ್‌್, ಶಾಹಿದ್‌, ಇಕ್ಬಾಲ್‌ ಮತ್ತು ಕಮರುದ್ದೀನ್‌ ಶಿಕ್ಷೆಗೆ ಗುರಿಯಾದ ಅಪರಾಧಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT