ADVERTISEMENT

ಪತಂಜಲಿ: ₹ 20 ಸಾವಿರ ಕೋಟಿ ವರಮಾನ ನಿರೀಕ್ಷೆ

ಪಿಟಿಐ
Published 4 ಮೇ 2017, 19:35 IST
Last Updated 4 ಮೇ 2017, 19:35 IST
ಪತಂಜಲಿ: ₹ 20 ಸಾವಿರ ಕೋಟಿ ವರಮಾನ ನಿರೀಕ್ಷೆ
ಪತಂಜಲಿ: ₹ 20 ಸಾವಿರ ಕೋಟಿ ವರಮಾನ ನಿರೀಕ್ಷೆ   

ನವದೆಹಲಿ: ಬಾಬಾ ರಾಮದೇವ್‌ ಪ್ರವರ್ತಕರಾಗಿರುವ ಪತಂಜಲಿ ಸಂಸ್ಥೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ (2017–18) ₹ 20 ಸಾವಿರ ಕೋಟಿ ವರಮಾನ ಗಳಿಸುವ ನಿರೀಕ್ಷೆ ಇಟ್ಟುಕೊಂಡಿದೆ.

ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (Fast moving consumer goods) ವಿಭಾಗದಲ್ಲಿ ಸದ್ಯ ಪತಂಜಲಿ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. 2006ರಲ್ಲಿ ಪತಂಜಲಿ ಆಯುರ್ವೇದ ಲಿಮಿಟೆಡ್‌ ಸ್ಥಾಪನೆಯಾಗಿದ್ದು, ಎಲ್ಲಾ ಉತ್ಪನ್ನಗಳೂ ಉತ್ತಮ ಮಾರಾಟ ಪ್ರಗತಿ ಕಾಣುತ್ತಿವೆ. 2017ರ  ಮಾರ್ಚ್‌ 31ರ ಅಂತ್ಯಕ್ಕೆ ಸಂಸ್ಥೆಯ ವರಮಾನ ₹10,561 ಕೋಟಿಗಳಷ್ಟಾಗಿದೆ. 

‘ಸಂಬಾರ, ಬೇಳೆಕಾಳು, ಖಾದ್ಯ ತೈಲ, ಬಿಸ್ಕೆಟ್‌ ಮತ್ತು ಪಾನೀಯ ವಿಭಾಗಳಿಗೂ ಈ ವರ್ಷ ವಹಿವಾಟು ವಿಸ್ತರಣೆ ಮಾಡಲಾಗುವುದು’ ಎಂದು ರಾಮದೇವ್‌ ತಿಳಿಸಿದರು.

‘ಶೇ 99 ರಷ್ಟು ಉತ್ಪನ್ನಗಳು ಸಂಪೂರ್ಣವಾಗಿ ದೇಶದಲ್ಲಿಯೇ ತಯಾರಾಗುತ್ತಿವೆ. ಆದರೆ, ಉತ್ಪನ್ನಗಳ ತಯಾರಿಕೆಯನ್ನು ಹೊರಗುತ್ತಿಗೆಗೆ ನೀಡಲಾಗುತ್ತದೆ ಎಂದು ಪತಂಜಲಿ ಬಗ್ಗೆ ವಿನಾಕಾರಣ ವದಂತಿ ಹಬ್ಬಿಸಲಾಗುತ್ತಿದೆ’ ಎಂದು ರಾಮದೇವ್‌ ಅಸಮಾಧಾನ ವ್ಯಕ್ತಪಡಿಸಿದರು.

₹ 5000 ಕೋಟಿ ಹೂಡಿಕೆ: ‘ಈ ವರ್ಷ ನೊಯ್ಡಾ, ನಾಗಪುರ ಮತ್ತು ಇಂದೋರ್‌ ಸೇರಿ ಒಟ್ಟು ಐದು ಕಡೆಗಳಲ್ಲಿ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಒಟ್ಟು ₹5000 ಕೋಟಿ ಹೂಡಿಕೆ ಮಾಡಲಾಗುವುದು’ ಎಂದು ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ  ತಿಳಿಸಿದರು.
*
ಈ ವರ್ಷ ಎರಡು ಪಟ್ಟು ಪ್ರಗತಿ ಸಾಧಿಸಲಿದ್ದೇವೆ. ಮುಂದಿನ ವರ್ಷ ಎಫ್‌ಎಂಸಿಜಿ ವಿಭಾಗದಲ್ಲಿ  ದೇಶದಲ್ಲಿಯೇ ಮೊದಲ ಸ್ಥಾನ ಪಡೆಯಲಿದ್ದೇವೆ.
ರಾಮದೇವ್,
ಪತಂಜಲಿ ಪ್ರವರ್ತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.