ADVERTISEMENT

ಪರಮಾಣು ಒಪ್ಪಂದ ದೊಡ್ಡ ಸಾಧನೆ: ಮೋದಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 7:24 IST
Last Updated 19 ಏಪ್ರಿಲ್ 2015, 7:24 IST
-ಪಿಟಿಐ ಚಿತ್ರ
-ಪಿಟಿಐ ಚಿತ್ರ   

ನವದೆಹಲಿ(ಐಎಎನ್ ಎಸ್): ಫ್ರಾನ್ಸ್ ಮತ್ತು ಕೆನಡಾ ರಾಷ್ಟ್ರಗಳ ಜತೆ ಮಾಡಿಕೊಂಡಿರುವ ಪರಮಾಣು ಒಪ್ಪಂದಗಳು ದೊಡ್ಡ ಸಾಧನೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಬಿಜೆಪಿಯ ಸಂಸದರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ಸರ್ಕಾರಗಳು ಪರಮಾಣು ಒಪ್ಪಂದವನ್ನು ಮುಂದೂಡುತ್ತಲೇ ಬಂದವು. ಆದರೆ, ನಮ್ಮ ಸರ್ಕಾರ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ಮುಂದಿನ ದಿನಗಳಲ್ಲಿ ಭಾರೀ ಪ್ರಭಾವ ಬೀರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರ ರಚನೆಯಾಗಿ ಒಂದು ವರ್ಷ ಪೂರೈಸುತ್ತಿದೆ. ವರ್ಷದ ಮೊದಲ ದಿನವನ್ನು ರಾಷ್ಟ್ರದ ಬಡವರ ಏಳ್ಗೆಗಾಗಿ ಮೀಸಲಿಟ್ಟು, ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಚರ್ಚೆ ನಡೆಸಲಾಗಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಯೆಮನ್ ಬಿಕ್ಕಟ್ಟು ಹಾಗೂ ಹಿಂಸಾಚಾರದಿಂದ ಅಲ್ಲಿ ತೊದರೆಯಲ್ಲಿ ಸಿಲುಕಿದ್ದ ಭಾರತೀಯರನ್ನು ಯಶಸ್ವಿಯಾಗಿ ಕರೆತರುವಲ್ಲಿ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಸಚಿವ ವಿ.ಕೆ. ಸಿಂಗ್ ಅವರು ಕಾರ್ಯ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.