ADVERTISEMENT

ಬಳಕೆಯಾಗದ ನಿರ್ಭಯ ನಿಧಿ: ಸ್ಥಾಯಿ ಸಮಿತಿ ಟೀಕೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2014, 19:30 IST
Last Updated 16 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ): ‘ನಿರ್ಭಯಾ ನಿಧಿ’ ಬಳಕೆ ಮಾಡಿಕೊಳ್ಳದ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿ, ಮಹಿಳೆಯರ ಸುರಕ್ಷತೆ ಉದ್ದೇಶದ ಈ ಯೋಜನೆಯ ಹೆಸರೇ ತಪ್ಪಾಗಿದೆ. ಅದರಲ್ಲಿ ಹೆಣ್ಣು ಮಗುವಿನ ಉಲ್ಲೇಖವೇ ಇಲ್ಲ ಎಂದಿದೆ.

ಯೋಜನೆಗಳಿಗೆ ಹಣ ಖರ್ಚಾಗಲೀ, ಬಿಡಲಿ ಖರ್ಚು– ವೆಚ್ಚಗಳ ನಿರ್ವಹಣಾ ಇಲಾಖೆಗೆ ಪ್ರತಿ ವರ್ಷವು ಹಣಕಾಸು ಮಂಜೂರು ಮಾಡುವುದು ಅಭ್ಯಾಸ ಆಗಿಹೋಗಿದೆ. ನೀತಿನಿರೂಪಣೆ ಮತ್ತು ಯೋಜನೆಗೆ ಹಣಕಾಸು ಹೊಂದಾಣಿಕೆಯಲ್ಲಿ ವಿಳಂಬ ಆಗುತ್ತಿದೆ
ಎಂದು ಸಂಸತ್ತಿನಲ್ಲಿ ಮಂಗಳವಾರ ಮಂಡಿಸಿದ ವರದಿಯಲ್ಲಿ ಹಣಕಾಸು  ಸಮಿತಿ ಸರ್ಕಾರದ ವಿರುದ್ಧ ಚಾಟಿ ಬೀಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.