ADVERTISEMENT

ಬಿಜೆಪಿಗೆ ಇನ್ನೂ ನಾಲ್ವರು ಶಾಸಕರ ಬೆಂಬಲ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 19:30 IST
Last Updated 21 ಅಕ್ಟೋಬರ್ 2014, 19:30 IST

ಚಂಡೀಗಡ (ಪಿಟಿಐ): ಹರಿಯಾಣ­ದಲ್ಲಿ ಸರಳ ಬಹುಮತ ಪಡೆದು ಅಧಿಕಾರ ಹಿಡಿಯಲು ಸಿದ್ಧವಾಗಿರುವ ಬಿಜೆಪಿಗೆ ನಾಲ್ವರು ಶಾಸಕರು ಬೆಂಬಲ ನೀಡಿದ್ದಾರೆ.

ಬಹುಜನ ಸಮಾಜ ಪಕ್ಷದಿಂದ ಆಯ್ಕೆಯಾಗಿರುವ ಏಕೈಕ ಶಾಸಕ ತೇಕ್‌ ಚಂದ್ ಶರ್ಮ ಮತ್ತು ಮೂವರು ಪಕ್ಷೇತರ ಶಾಸಕರು ಬೆಂಬಲ ನೀಡಿರು­ವವರು.

90 ಕ್ಷೇತ್ರಗಳ ವಿಧಾನಸಭೆಗೆ 47 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೆ ಈ ನಾಲ್ವರು ಬೆಂಬಲ ನೀಡಿರುವುದರಿಂದ, ಅದರ ಒಟ್ಟು ಸದಸ್ಯ ಬಲ 51ಕ್ಕೆ ಏರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.