ADVERTISEMENT

ಮುಂಬೈ ಮೆಟ್ರೋ ರೈಲಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2014, 10:49 IST
Last Updated 8 ಜೂನ್ 2014, 10:49 IST

ಮುಂಬೈ(ಪಿಟಿಐ): ಇಲ್ಲಿನ ಜನರ ಬಹು ನಿರೀಕ್ಷೆಯ ಮೊದಲ ಮೆಟ್ರೋ ರೈಲು ಸಂಚಾರಕ್ಕೆ ಭಾನುವಾರ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಚಾಲನೆ ನೀಡಿದರು.

ಚವ್ಹಾಣ್ ಹಾಗೂ ಎಡಿಎಜಿಯ ಮುಖ್ಯಸ್ಥ ಅನಿಲ್ ಅಂಬಾನಿ ಅವರು ಬೆಳಿಗ್ಗೆ 10.10ಕ್ಕೆ ನೂತನ ರೈಲು ಸೇವೆಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಚವ್ಹಾಣ್ ಅವರು, ಮೆಟ್ರೋ ರೈಲು ಸೇವೆ ಮುಂಬೈ ನಗರದ ಜನರಲ್ಲಿ ಕ್ರಾಂತಿಕಾರಕ ಬದಲಾವಣೆ ಉಂಟು ಮಾಡಲಿದೆ ಎಂದರು.

ನೂತನ ಮೆಟ್ರೋ ರೈಲು ವರ್ಸೋವಾ–ಘಾಟ್ಕೋಪರ್ ಮಧ್ಯೆ 11.4 ಕಿ.ಮೀ. ದೂರ ಸಂಚರಿಸಲಿದ್ದು, ಪ್ರಯಾಣಕ್ಕೆ 20 ನಿಮಿಷ ಕಾಲಾವಕಾಶ ತೆಗೆದುಕೊಳ್ಳಲಿದೆ. ಇದೇ ದೂರವನ್ನು ರಸ್ತೆ ಮಾರ್ಗದ ಮೂಲಕ ಕ್ರಮಿಸಲು 90 ನಿಮಿಷ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.