ADVERTISEMENT

ರಾಜಾ, ಕನಿಮೊಳಿ ವಿರುದ್ಧ ಆರೋಪಪಟ್ಟಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2014, 19:30 IST
Last Updated 25 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ಎರಡನೇ ತಲೆಮಾರಿನ ತರಂಗಾಂತರ ಹಂಚಿಕೆ (2ಜಿ) ಹಗರಣಕ್ಕೆ ಸಂಬಂಧಿಸಿದ ಹಣದ ಲೇವಾದೇವಿ ಪ್ರಕರಣದಲ್ಲಿ ದೂರ­ಸಂಪರ್ಕ ಖಾತೆ ಮಾಜಿ ಸಚಿವ ಎ.­ರಾಜಾ, ಡಿಎಂಕೆ ಸಂಸದೆ ಕನಿಮೊಳಿ ಹಾಗೂ ಇನ್ನಿತರ 17 ಮಂದಿ ವಿರುದ್ಧ ಜಾರಿ ನಿರ್ದೇಶನಾಲಯವು(ಇ.ಡಿ) ದೆಹಲಿಯ ವಿಶೇಷ ಕೋರ್ಟ್‌­ನಲ್ಲಿ ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದೆ.

ಪಬ್ಲಿಕ್‌ ಪ್ರಾಸಿಕ್ಯೂಟರ್‌್ ನವೀನ್‌ ಕುಮಾರ್‌್ ಮಟ್ಟಾ ಅವರು ವಿಶೇಷ ಸಿಬಿಐ ನ್ಯಾಯಾಧೀಶ ಒ.ಪಿ.ಸೈನಿ  ಅವರ ಮುಂದೆ ಆರೋಪಪಟ್ಟಿ ಸಲ್ಲಿಸಿದರು.

ಏಪ್ರಿಲ್‌್ 30ರಂದು ಈ ಸಂಬಂಧ ಕೋರ್ಟ್‌ನಲ್ಲಿ ವಿಚಾ­ರಣೆ ನಡೆಯಲಿದೆ. ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ಪತ್ನಿ ದಯಾಳು ಅಮ್ಮಾಳ್‌್, ಸ್ವಾನ್‌್ ಟೆಲಿಕಾಂ ಪ್ರೈವೆಟ್‌ ಲಿಮಿ­ಟೆಡ್‌ (ಎಸ್‌ಟಿ­ಪಿಎಲ್‌) ಪ್ರವ­ರ್ತಕ­­ರಾದ ಶಾಹಿದ್‌್ ಉಸ್ಮಾನ್‌್ ಬಲ್ವಾ, ವಿನೋದ್‌ ಗೋ­ಯೆಂಕಾ ಅವ­ರನ್ನೂ ಆರೋಪ­ಪಟ್ಟಿ­ಯಲ್ಲಿ ಹೆಸರಿ­ಸಿದೆ. ಡಿಎಂಕೆ ನಡೆ­ಸುವ ಕಲೈಂ­ಗಾರ್‌್ ಟಿ.ವಿಗೆ ₨200 ಕೋಟಿ ಕೊಟ್ಟ ಆರೋಪ ಎಸ್‌ಟಿ­ಪಿ­ಎಲ್‌ ಪ್ರವರ್ತಕರ ಮೇಲಿದೆ.

ಅಕ್ರಮ ಹಣ ಚಲಾವಣೆ ಕಾಯ್ದೆ ತಡೆ ಅಡಿ  10 ವ್ಯಕ್ತಿ­ಗಳು ಹಾಗೂ 9 ಕಂಪೆನಿಗಳ  ವಿರುದ್ಧ ಇ.ಡಿ ದೋಷಾರೋಪ ಹೊರಿಸಿದೆ. ಕುಸೆಗಾಂ ಫ್ರೂಟ್ಸ್‌ ಆ್ಯಂಡ್‌ ವೆಜಿಟೇಬಲ್‌ ಪ್ರೈವೆಟ್‌ ಲಿಮಿಟೆಡ್‌ ನಿರ್ದೇಶಕರಾದ ಆಸಿಫ್‌್  ಬಲ್ವಾ ಹಾಗೂ ರಾಜೀವ್‌್ ಅಗರ್‌ವಾಲ್‌, ಬಾಲಿವುಡ್‌ ನಿರ್ಮಾಪಕ ಕರೀಂ ಮೊರಾನಿ, ಕಲೈಂಗಾರ್‌್ ಟಿ.ವಿ ವ್ಯವಸ್ಥಾಪಕ ನಿರ್ದೇಶಕ ಶರದ್‌ ಕುಮಾರ್‌ ಅವರನ್ನು ಕೂಡ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.