ADVERTISEMENT

ಲೇಖಕಿ ಮಹಾಶ್ವೇತಾದೇವಿ ನಿಧನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 0:00 IST
Last Updated 29 ಜುಲೈ 2016, 0:00 IST
ಲೇಖಕಿ ಮಹಾಶ್ವೇತಾದೇವಿ ನಿಧನ
ಲೇಖಕಿ ಮಹಾಶ್ವೇತಾದೇವಿ ನಿಧನ   

ಕೋಲ್ಕತ್ತ (ಪಿಟಿಐ): ಬುಡಕಟ್ಟು ಮತ್ತು ಶೋಷಣೆಗೊಳಗಾದ ಇತರ ಜನರಿಗಾಗಿ ಜೀವನಪರ್ಯಂತ ಹೋರಾಟ ನಡೆಸಿದ ಲೇಖಕಿ ಮಹಾಶ್ವೇತಾದೇವಿ (91) ಅವರು ಬಹುಅಂಗಾಂಗ ವೈಫಲ್ಯದಿಂದ ಗುರುವಾರ ನಿಧನರಾದರು.

ಅವರು ದೀರ್ಘ ಕಾಲದಿಂದ ಮೂತ್ರಕೋಶ, ಶ್ವಾಸಕೋಶ ಮತ್ತು ಇತರ ವಯೋಸಹಜ ಅನಾರೋಗ್ಯಗಳಿಂದ ಬಳಲುತ್ತಿದ್ದರು. ಮೇ 22ರಂದು ಅವರನ್ನು ಇಲ್ಲಿನ ಬೆಲ್‌ ವ್ಯೂ ಕ್ಲಿನಿಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪದ್ಮವಿಭೂಷಣ, ಮ್ಯಾಗ್ಸೆಸೆ, ಸಾಹಿತ್ಯ ಅಕಾಡೆಮಿ ಮತ್ತು ಜ್ಞಾನಪೀಠ ಸೇರಿ ಅಸಂಖ್ಯ ಪ್ರಶಸ್ತಿಗಳಿಂದ ಪುರಸ್ಕೃತ ರಾಗಿರುವ ಅವರು ಕೃತಿಗಳ ಮೂಲಕ ಮಾತ್ರವಲ್ಲದೆ ಇತರ ಹೋರಾಟಗಳ ಮೂಲಕವೂ ಶೋಷಿತರ ಧ್ವನಿಯಾಗಿದ್ದರು.

ಬುಡಕಟ್ಟು ಜನರು ಮತ್ತು ಶೋಷಿತರಿಗಾಗಿ ಹಲವು ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ ಪೋಷ ಕರಾಗಿದ್ದರು. ಶೋಷಿತರ ಪರವಾಗಿ ಸರ್ಕಾರಗಳ ಜತೆ ಮಾತುಕತೆ ನಡೆಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.