ADVERTISEMENT

ವರದಕ್ಷಿಣೆ ಕಾನೂನಿಗೆ ತಿದ್ದುಪಡಿ?

ಮಳೀಮಠ್‌ ಆಯೋಗದ ಶಿಫಾರಸು

​ಪ್ರಜಾವಾಣಿ ವಾರ್ತೆ
Published 17 ಮೇ 2015, 11:15 IST
Last Updated 17 ಮೇ 2015, 11:15 IST

ನವದೆಹಲಿ(ಪಿಟಿಐ): ವರದಕ್ಷಿಣೆ  ಕಿರುಕುಳ ಕಾನೂನು ದುರ್ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ  ಸರ್ಕಾರ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 498ಎ (ವರದಕ್ಷಿಣೆ ಬೇಡಿಕೆ, ಪತಿ ಹಾಗೂ ಆತನ ಪೋಷಕರಿಂದ ಆಗುವ ಕಿರುಕುಳ ತಡೆ)ಗೆ ತಿದ್ದುಪಡಿ ತರಲು ಚಿಂತನೆ ನಡೆಸಿದೆ.

ಪ್ರತಿ ವರ್ಷ ದೇಶದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ 10 ಸಾವಿರ ನಕಲಿ ಪ್ರಕರಣಗಳು ದಾಖಲಾಗುತ್ತಿವೆ. ಸೆಕ್ಷನ್‌ 498ರA ಅಡಿ ಪ್ರಕರಣ ದಾಖಲಾದ ಕೂಡಲೇ ಪತಿ ಹಾಗೂ ಅವರ ಮನೆಯವರನ್ನು ಬಂಧಿಸಬಹುದು. ಈ ಪ್ರಕರಣದಲ್ಲಿ ಜಾಮೀನು ಸಿಗುವುದಿಲ್ಲ.

ಇದರ ಬದಲು ‘ರಾಜಿ’  ಮೂಲಕ ಪ್ರಕರಣ ಇತ್ಯರ್ಥಪಡಿಸಲು ಅವಕಾಶ ಇರುವಂತೆ ಕಾನೂನಿಗೆ ತಿದ್ದುಪಡಿ ತರಲು ನ್ಯಾಯಮೂರ್ತಿ ಮಳೀಮಠ್‌ ಆಯೋಗ ನೀಡಿದ ಶಿಫಾರಸನ್ನು ಸರ್ಕಾರ ಪರಿಶೀಲಿಸುತ್ತಿದೆ.

ಕಾನೂನು ತಿದ್ದಪಡಿಗೆ ಸಂಬಂಧಿಸಿದಂತೆ ಗೃಹ ಸಚಿವಾಲಯವು ಕೇಂದ್ರ ಸಚಿವ ಸಂಪುಟಕ್ಕೆ ಕರಡು ಪ್ರತಿ ರವಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.