ADVERTISEMENT

ವ್ಯಾಪಂ ಹಗರಣ: ಕಾಲೇಜ್‌ ಡೀನ್‌ ನಿಗೂಢ ಸಾವು

​ಪ್ರಜಾವಾಣಿ ವಾರ್ತೆ
Published 5 ಜುಲೈ 2015, 7:26 IST
Last Updated 5 ಜುಲೈ 2015, 7:26 IST

ನವದೆಹಲಿ (ಪಿಟಿಐ): ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ (ವ್ಯಾಪಂ) ನೇಮಕಾತಿ ಹಗರಣದ ತನಿಖಾ ವರದಿ ಮಾಡುತ್ತಿದ್ದ ವರದಿಗಾರ ಅಕ್ಷಯಸಿಂಗ್‌ ಶನಿವಾರ ನಿಗೂಢವಾಗಿ ಸಾವನ್ನಪ್ಪಿರುವ ಬೆನ್ನಲೇ ಭಾನುವಾರ ಮೆಡಿಕಲ್‌ ಕಾಲೇಜಿನ ಡೀನ್‌ ದೆಹಲಿಯ ಖಾಸಗಿ ಹೊಟೇಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಜಬಲ್‌ಪುರದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಮೆಡಿಕಲ್‌ ಕಾಲೇಜಿನ ಡೀನ್‌ ಅರುಣ್‌ ಶರ್ಮಾ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇವರು ಹೆಸರು ವ್ಯಾಪಂ ಹಗರಣದಲ್ಲಿ ಕೇಳಿಬಂದಿತ್ತು.

ಅರುಣ್‌ ಶರ್ಮಾ ಎರಡು ದಿನಗಳಿಂದ ಹೊಟೇಲ್‌ನಲ್ಲಿ ತಂಗಿದ್ದರು. ಹಲವು ಬಾರಿ ರೂಮಿನ ಬಾಗಿಲು ಬಡಿದರು ಶರ್ಮಾ ಬಾಗಿಲು ತೆರೆದಿರಲಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ  ಬಾಗಿಲು ತೆರೆದಾಗ ಅರುಣ್‌ ಶರ್ಮಾ ಶವವಾಗಿದ್ದರು. ಅಲ್ಲಿ ಖಾಲಿಯಾಗಿರುವ ಮಧ್ಯದ ಬಾಟಲ್‌ ದೊರೆತಿದ್ದು, ಅವರು  ಮಿತಿ ಮೀರಿ ಮಧ್ಯ ಸೇವಿಸಿ ವಾಂತಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಶವ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಹಗರಣಕ್ಕೆ ಸಂಬಂಧಿಸಿದಂತೆ  46 ಮಂದಿ ಇದುವರೆಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT