ADVERTISEMENT

ಶರ್ಮಾ ಮನವಿ ತಿರಸ್ಕರಿಸಿದ ಹೈಕೋರ್ಟ್‌

ಮಹಿಳೆ ಮೇಲೆ ಅಕ್ರಮ ನಿಗಾ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2014, 19:30 IST
Last Updated 2 ಏಪ್ರಿಲ್ 2014, 19:30 IST

ಅಹಮದಾಬಾದ್‌ (ಪಿಟಿಐ): ಗುಜರಾತ್‌ ಮಾಜಿ ಗೃಹ ಸಚಿವ ಅಮಿತ್‌ ಷಾ, ‘ಸಾಹೇಬರ’ ಆಣತಿಯಂತೆ ಮಹಿಳೆಯೊಬ್ಬರ ಮೇಲೆ ಅಕ್ರಮ ನಿಗಾ ಇಟ್ಟ ಪ್ರಕರಣದಲ್ಲಿ  ಮುಖ್ಯಮಂತ್ರಿ ನರೇಂದ್ರ ಮೋದಿ  ವಿರುದ್ಧ ಎಫ್‌ಐಆರ್‌್ ದಾಖಲಿಸುವುದಕ್ಕೆ ನಿರ್ದೇಶನ ನೀಡುವಂತೆ ಕೋರಿ ಅಮಾನತುಗೊಂಡ ಐಎಎಸ್‌ ಅಧಿಕಾರಿ  ಪ್ರದೀಪ್‌್ ಶರ್ಮಾ ಸಲ್ಲಿಸಿದ್ದ ಮನವಿಯನ್ನು ಗುಜರಾತ್‌ ಹೈಕೋರ್ಟ್‌್ ಬುಧವಾರ ತಿರಸ್ಕರಿಸಿದೆ.

‘ ಇದಕ್ಕೆ ಪರ್ಯಾಯ ಪರಿಹಾರಗಳು ಇವೆ. ನೀವು ಮ್ಯಾಜಿಸ್ಟ್ರೇಟ್‌್ ಕೋರ್ಟ್‌್ ಮೊರೆ ಹೋಗಿ’ ಎಂದು ನ್ಯಾಯಮೂರ್ತಿ ಜಿ.ಆರ್‌.ಉಧ್ವಾನಿ ಅವರು ಶರ್ಮಾ ಅವರಿಗೆ ಸೂಚಿಸಿದರು. ಶರ್ಮಾ ಈ ಮೊದಲು ಗಾಂಧಿನಗರದಲ್ಲಿರುವ ಸೆಕ್ಟರ್‌ 7 ಪೊಲೀಸ್‌್ ಠಾಣೆಯನ್ನು ಸಂಪರ್ಕಿಸಿದ್ದರು.

ಆದರೆ ಪೊಲೀಸರು ಎಫ್‌್ಐಆರ್‌್ ದಾಖಲಿಸಲು ನಿರಾಕರಿಸಿದ್ದರು. ನಂತರದಲ್ಲಿ ಅವರು ಗುಜರಾತ್‌್ ಡಿಜಿಪಿ ಪಿ.ಸಿ.ಠಾಕೂರ್‌್ ಹಾಗೂ ಗಾಂಧಿನಗರ ಎಸ್‌ಪಿ ಶರದ್‌್ ಸಿಂಘಾಲ್‌್ ಮೊರೆ ಹೋಗಿದ್ದರು. ಆದರೆ ಯಾವ ಪ್ರಯೋಜನವೂ ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.