ADVERTISEMENT

ಸಂಸತ್‌, ಸುಪ್ರೀಂಕೋರ್ಟ್‌ ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ಲೋಪ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2014, 19:30 IST
Last Updated 26 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ಸಂಸತ್‌ ಮತ್ತು ಸುಪ್ರೀಂಕೋರ್ಟ್‌ ಕಟ್ಟಡಗಳು ಗಂಭೀರ ರೀತಿಯ ಅಗ್ನಿ ಸುರ­ಕ್ಷತಾ ಲೋಪಗಳನ್ನು ಎದುರಿ­ಸು­ತ್ತಿವೆ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಹೇಳಿದೆ.

ದಶಕದ ಹಿಂದೆ ಸುಪ್ರೀಂಕೋರ್ಟ್‌ನ ಅಗ್ನಿ ಸುರ­ಕ್ಷತೆ ಪರಿಶೀಲನೆ ನಡೆಸಿದ ದೆಹಲಿ ಆಗ್ನಿಶಾಮಕ ದಳ ಯಾವ ಕ್ರಮವನ್ನೂ ಕೈಗೊಳ್ಳದ ಬಗ್ಗೆ ಸಿಐಸಿ ಅಗ್ನಿಶಾಮಮಕ ದಳವನ್ನು ತರಾಟೆಗೆ ತೆಗೆದುಕೊಂಡಿದೆ.

ಸಂಸತ್‌ ಮತ್ತು ಸುಪ್ರೀಂಕೋರ್ಟ್‌ನ ಅಗ್ನಿ ಸುರಕ್ಷತೆ ಲೋಪಗಳ ಮಾಹಿತಿ ಬಿಡು­ಗಡೆ ಮಾಡದ ಬಗ್ಗೆಯೂ ಅಸಮಾ­ಧಾನ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.