ADVERTISEMENT

ಸಾಲ ವಸೂಲಿ ಸುಗ್ರೀವಾಜ್ಞೆ: ಶೀಘ್ರ ಆರ್‌ಬಿಐ ಮಾರ್ಗಸೂಚಿ ಪ್ರಕಟ

ಪಿಟಿಐ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ಸಾಲ ವಸೂಲಿ ಸುಗ್ರೀವಾಜ್ಞೆ: ಶೀಘ್ರ ಆರ್‌ಬಿಐ ಮಾರ್ಗಸೂಚಿ ಪ್ರಕಟ
ಸಾಲ ವಸೂಲಿ ಸುಗ್ರೀವಾಜ್ಞೆ: ಶೀಘ್ರ ಆರ್‌ಬಿಐ ಮಾರ್ಗಸೂಚಿ ಪ್ರಕಟ   

ನವದೆಹಲಿ: ಅಂದಾಜು ₹8 ಲಕ್ಷ ಕೋಟಿ ಸಾಲ ವಸೂಲಿಗೆ ತಂದಿರುವ ಸುಗ್ರೀವಾಜ್ಞೆಯ ಮಾರ್ಗಸೂಚಿಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಇನ್ನೂ 15 ದಿನಗಳಲ್ಲಿ ಪ್ರಕಟಿಸಲಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಸೂಲಾಗದ ಸಾಲ (ಎನ್‌ಪಿಎ) ಸಮಸ್ಯೆ ಪ್ರಕರಣಗಳ ಇತ್ಯರ್ಥಕ್ಕೆ ಪ್ರತ್ಯೇಕ ಘಟಕ ರಚಿಸುವ ಆರ್‌ಬಿಐ ಶಿಫಾರಸನ್ನೂ ಮಾರ್ಗಸೂಚಿ ಒಳಗೊಂಡಿರಲಿದೆ. ಪ್ರಕರಣಗಳ ಇತ್ಯರ್ಥಕ್ಕೆ 60–90 ದಿನಗಳ ಕಾಲಮಿತಿಯನ್ನು ನಿಗದಿ ಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಷ್ಟದ ಉದ್ಯಮಗಳು ಮತ್ತು ಸಾಲ ಪಡೆದ ಉದ್ಯಮಗಳನ್ನು ಬೇರೆ ಉದ್ಯಮಗಳು ಸ್ವಾಧೀನ ಪಡೆದಿರುವ ಪ್ರಕರಣಗಳನ್ನು ಪತ್ತೆ ಹಚ್ಚಲು ಮತ್ತೊಂದು ಪ್ರತ್ಯೇಕ ಘಟಕ ತೆರೆಯುವ ಪ್ರಸ್ತಾಪ ಕೂಡ ಈ ಮಾರ್ಗಸೂಚಿಯಲ್ಲಿದೆ ಎನ್ನಲಾಗಿದೆ.

ಉದ್ದೇಶಿತ ಎನ್‌ಪಿಎ ಸುಗ್ರೀವಾಜ್ಞೆ ಬ್ಯಾಂಕುಗಳ ನಿಯಂತ್ರಣ ಕಾಯ್ದೆ 1949ರ 35 ಎ ಸೆಕ್ಷನ್‌ಗೆ ತಿದ್ದುಪಡಿ ತರಲಿದ್ದು, ಹೊಸದಾಗಿ 35 ಎಎಮತ್ತು 35 ಎಬಿ ಎರಡು ಹೊಸ ಸೆಕ್ಷನ್‌ಗಳನ್ನು ಸೇರ್ಪಡೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.