ADVERTISEMENT

ಸೌದಿಯಲ್ಲಿ ಭಾರತೀಯ ಮನೆ ಕೆಲಸದಾಕೆಯ ಕೈ ಕತ್ತರಿಸಿದ ಮಾಲೀಕ

ಅಮಾನವೀಯ, ಪೈಶಾಚಿಕ ಕೃತ್ಯ; ಸುಷ್ಮಾ ಸ್ವರಾಜ್‌ ಖಂಡನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2015, 6:28 IST
Last Updated 9 ಅಕ್ಟೋಬರ್ 2015, 6:28 IST

ನವದೆಹಲಿ(ಪಿಟಿಐ): ಸೌದಿ ಅರೇಬಿಯಾದಲ್ಲಿ ಭಾರತೀಯ ಮೂಲದ ಮನೆ ಕೆಲಸದಾಕೆಯ ಕೈ ಕತ್ತರಿಸಿರುವ ಘಟನೆ ಅಮಾನವೀಯ ಮತ್ತು ಒಪ್ಪಲು ಸಾಧ್ಯವೇ ಇಲ್ಲದ ಘಟನೆ  ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್‌ ಶುಕ್ರವಾರ ಹೇಳಿದ್ದಾರೆ.

ಸೌದಿಯ ರಿಯಾದ್‌ನಲ್ಲಿ ಮನೆ ಕೆಲಸಕ್ಕಿದ್ದ ತಮಿಳುನಾಡಿನ ವೆಲ್ಲೂರು ಮೂಲದ ಕಸ್ತೂರಿ ಮುನಿರತ್ನಂ (55) ಎಂಬ ಮಹಿಳೆಗೆ ಕಿರುಕುಳ ನೀಡಿ ಆಕೆಯ ಕೈಯನ್ನು ಮನೆ ಮಾಲೀಕ ಕತ್ತರಿಸಿದ್ದರು.    ಈ ವಿಡಿಯೊ ದೃಶ್ಯ ಗುರುವಾರ ರಾತ್ರಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿ ಭಾರಿ ವಿವಾದ ಸೃಷ್ಟಿಸಿತ್ತು. ಕಸ್ತೂರಿಯನ್ನು ಭಾರತಕ್ಕೆ ಕರೆತರಲು ರಾಯಭಾರಿ ಕಚೇರಿ ಮೇಲೆ ಒತ್ತಡ ಹೇರಲಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್‌, ಈ ಪೈಶಾಚಿಕ ಕೃತ್ಯವನ್ನು ಒಪ್ಪಲು ಸಾಧ್ಯವಿಲ್ಲ. ಸೌದಿ ಅಧಿಕಾರಿಗಳ ಜತೆ ಈ ಕುರಿತು ಮಾತನಾಡಿದ್ದೇನೆ. ಭಾರತೀಯ ರಾಯಭಾರಿ ಅಧಿಕಾರಿಗಳು ಸಂತ್ರಸ್ಥ ಮಹಿಳೆಯ ಜತೆ ನಿರಂತರ ಸಂಪರ್ಕದಲ್ಲಿದ್ದು, ಆಕೆಯನ್ನು ಸ್ವದೇಶಕ್ಕೆ ಕರೆತರಲು ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ಮನೆ ಕೆಲಸದಾಕೆಯ ಕೈ ಕತ್ತರಿಸಿದ ಮಾಲೀಕನ ವಿರುದ್ಧ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸುವಂತೆ ಸೌದಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.  ಕಸ್ತೂರಿಗೆ ಎಲ್ಲ ರೀತಿಯ ರಾಜತಾಂತ್ರಿಕ ನೆರವು ನೀಡಲು ಸೂಚಿಸಲಾಗಿದೆ ಎಂದು  ಸುಷ್ಮಾ ಟ್ವೀಟ್‌ ಮಾಡಿದ್ದಾರೆ.

ಸದ್ಯ ಕಸ್ತೂರಿ ಸೌದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT