ADVERTISEMENT

ಸ್ಪೈಸ್‌ಜೆಟ್‌ ಪುನಶ್ಚೇತನ: ಕೇಂದ್ರಕ್ಕೆ ವರದಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2014, 19:30 IST
Last Updated 26 ಡಿಸೆಂಬರ್ 2014, 19:30 IST

ನವದೆಹಲಿ(ಪಿಟಿಐ): ಕಂಪೆನಿಯ ಸಂಸ್ಥಾಪಕರಲ್ಲೊಬ್ಬರಾದ ಅಜಯ್‌ ಸಿಂಗ್‌ ಮತ್ತು ಅಮೆರಿಕ ಮೂಲದ ಜೆ.ಪಿ ಮೋರ್ಗನ್‌ ಚೇಸ್‌ ಸಂಸ್ಥೆಯಿಂದ 20 ಕೋಟಿ ಡಾಲರ್‌ (ರೂ1271 ಕೋಟಿ) ಹೂಡಿಕೆಯ ಭರವಸೆ ಸಿಕ್ಕ ನಂತರ ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್‌, ಕಂಪೆನಿಯ ಪುನಶ್ಚೇತನ ಕುರಿತ ಯೋಜನೆಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.

ಇದರ ಬೆನ್ನಲ್ಲೇ ಮುಂಬೈ ಷೇರು ವಿನಿಮಯ ಕೇಂದ್ರದ ಶುಕ್ರವಾರದ ವಹಿವಾಟಿನಲ್ಲಿ ಸ್ಪೈಸ್‌ಜೆಟ್‌ ಷೇರುಗಳ ಮೌಲ್ಯ ಶೇ 9ರಷ್ಟು ಹೆಚ್ಚಿದೆ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಕಂಪೆನಿಯನ್ನು ಮತ್ತೆ ಪೂರ್ಣ ಪ್ರಮಾಣದ ಕಾರ್ಯಾಚರಣೆಯ ಹಾದಿಗೆ ತರುವ ಸಲುವಾಗಿ ಸಿದ್ಧಪಡಿಸಿದ ‘ಕಂಪೆನಿ ಪುನಶ್ಚೇತನ ವರದಿ’ಯನ್ನು ಸ್ಪೈಸ್‌ಜೆಟ್‌ನ ಮುಖ್ಯ ನಿರ್ವಹಣಾಧಿಕಾರಿ ಸಂಜೀವ್‌ ಕಪೂರ್‌ ಅವರು ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಕಾರ್ಯದರ್ಶಿ ವಿ.ಸೋಮಸುಂದರಂ ಅವರಿಗೆ ಶುಕ್ರವಾರ ಸಲ್ಲಿಸಿದರು. ಅಜಯ್‌ ಸಿಂಗ್‌ ಅವರೂ ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.