ADVERTISEMENT

ಸ್ವದೇಶ ತಲುಪಿದ ದಾದಿಯರು

​ಪ್ರಜಾವಾಣಿ ವಾರ್ತೆ
Published 5 ಜುಲೈ 2014, 6:03 IST
Last Updated 5 ಜುಲೈ 2014, 6:03 IST

ಮುಂಬೈ (ಪಿಟಿಐ): ಸುನ್ನಿ ಉಗ್ರರ ವಶದಿಂದ ಬಿಡುಗಡೆಗೊಂಡಿದ್ದ ಕೇರಳದ ಎಲ್ಲಾ 46 ದಾದಿಯರು ಹಾಗೂ ಇತರ 137 ಪ್ರಯಾಣಿಕರನ್ನು ಹೊತ್ತ ಏರ್‌ ಇಂಡಿಯಾ ವಿಶೇಷ ವಿಮಾನವು ಇಂದು(ಶನಿವಾರ) ಮುಂಬೈಗೆ ಬಂದಿಳಿದೆ.

183 ಪ್ರಯಾಣಿಕರನ್ನು ಹೊತ್ತ ವಿಮಾನವು ಇಂದು (ಶನಿವಾರ) ಬೆಳಿಗ್ಗೆ  8.43ಕ್ಕೆ ಮುಂಬೈಗೆ ಬಂದಿಳಿದಿದೆ.

ನಿಗದಿಯಂತೆ ಕೊಚ್ಚಿಗೆ ತೆರಳಬೇಕಿದ್ದ ವಿಮಾನವು ಇಂಧನ ಹಾಗೂ ಕೇಟರಿಂಗ್ ಸೇವೆಗಳಿಗಾಗಿ ಮುಂಬೈನಲ್ಲಿ
‘ತಾಂತ್ರಿಕ ನಿಲುಗಡೆ’ಗೆ ಒಳಗಾಯಿತು.

ADVERTISEMENT

ಸುಮಾರು 9:55ಕ್ಕೆ ಕೇರಳಕ್ಕೆ ಪ್ರಯಾಣಿಸಲಿರುವ ವಿಮಾನವು 11:55ಕ್ಕೆ ಕೊಚ್ಚಿ ತಲುಪುವ ಸಾಧ್ಯತೆಗಳಿವೆ. ಅಲ್ಲಿಂದ 12:55ಕ್ಕೆ ಹೈದರಾಬಾದ್‌ಗೆ ತೆರಳಲಿರುವ ವಿಮಾನ  ಮಧ್ಯಾಹ್ನ 2:25ರ ವೇಳೆಗೆ ನಗರಕ್ಕೆ (ಮುಂಬೈ) ಬರಲಿದ್ದು ಕೊನೆಗೆ ಸಂಜೆ 5:40ಕ್ಕೆ  ದೆಹಲಿ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾದಿಯರು ಅಲ್ಲದೇ ವಿಮಾನದಲ್ಲಿ ಇತರ 137 ಭಾರತೀಯ ಪ್ರಜೆಗಳು ಪ್ರಯಾಣಿಸುತ್ತಿದ್ದಾರೆ.

23 ಸಿಬ್ಬಂದಿ, ಜಂಟಿ ಕಾರ್ಯದರ್ಶಿ ಮಟ್ಟದ ಒಬ್ಬರು ಐಎಫ್‌ಎಸ್‌ ಅಧಿಕಾರಿ ಹಾಗೂ ಒಬ್ಬರು ಐಎಎಸ್‌ ಮಹಿಳಾ ಅಧಿಕಾರಿ ಒಳಗೊಂಡ ಮೂವರು ಸರ್ಕಾರಿ ಅಧಿಕಾರಿಗಳು ಸೇರಿದಂತೆ ವಿಮಾಣದಲ್ಲಿ 183 ಪ್ರಯಾಣಿಕರಿದ್ದಾರೆ ಎಂದು ಕೊಚ್ಚಿಯಲ್ಲಿರುವ ಏರ್‌ ಇಂಡಿಯಾ  ವಕ್ತಾರರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.