ADVERTISEMENT

ಹಿಮ ಬಿರುಗಾಳಿ: 127 ಪ್ರವಾಸಿಗರ ರಕ್ಷಣೆ

ಬಲ್ಗೇರಿಯಾದ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 19:30 IST
Last Updated 20 ಮಾರ್ಚ್ 2017, 19:30 IST
ನವದೆಹಲಿ: ಅರುಣಾಚಲ ಪ್ರದೇಶದ ಸೇಲಾ  ಪಾಸ್‌ನಲ್ಲಿ ಹಿಮ ಬಿರುಗಾಳಿಗೆ ಸಿಲುಕಿದ್ದ 127 ಮಂದಿ ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದೆ.

ಆದರೆ, ಆರು ಮಂದಿ ವಿದೇಶೀಯರು ಇದ್ದ ತಂಡದಲ್ಲಿ  ಬಲ್ಗೇರಿಯಾದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಉಳಿದ ಐವರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಶನಿವಾರ ಮಧ್ಯಾಹ್ನ 2.45ರ ಸುಮಾರಿಗೆ ಹಿಮ ಬರುಗಾಳಿ ಬೀಸಿ, ಪ್ರವಾಸಿಗರಿದ್ದ ವಾಹನಗಳು ಹಿಮದಲ್ಲಿ ಸಿಲುಕಿಕೊಂಡಿದ್ದವು.
 
ಸುಮಾರು 3.15ರ ವೇಳೆಗೆ  ಸ್ಥಳ ತಲುಪಿದ ಸೇನೆಯ 71ನೇ ವಿಭಾಗೀಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಕಾರ್ಯಾಚರಣೆ ಮಧ್ಯ ರಾತ್ರಿವರೆಗೆ ನಡೆಯಿತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.