ನವದೆಹಲಿ (ಪಿಟಿಐ): ಬಹು ಕೋಟಿ ಮೌಲ್ಯದ ಆಗಸ್ಟಾವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣವು ಎನ್ಡಿಎ ಕೊರಳಿಗೆ ಸುತ್ತಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ.
ಹಗರಣಕ್ಕೆ ಸಂಬಂಧಿಸಿ ಸಿಬಿಐ ಮುಂದೆ ಹೇಳಿಕೆ ನೀಡಿರುವ ಮಾಜಿ ರಾಜ್ಯಪಾಲರಾದ ಎಂ.ಕೆ.ನಾರಾಯಣನ್್ ಹಾಗೂ ಬಿ.ವಿ.ವಾಂಛೂ, ‘ಹೆಲಿಕಾಪ್ಟರ್ಗಳು ಹಾರಾಡುವ ಗರಿಷ್ಠ ಎತ್ತರದ ಮಿತಿಯನ್ನು 18,000 ಅಡಿಯಿಂದ 15,000 ಅಡಿಗೆ ಇಳಿಸಲು 2003ರಲ್ಲಿ ಎನ್ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ನಿರ್ಧಾರ ತೆಗೆದುಕೊಳ್ಳಲಾಗಿತ್ತು’ ಎಂದು ತಿಳಿಸಿದ್ದಾರೆ.
ಹರಾಜು ಪ್ರಕ್ರಿಯೆಯಲ್ಲಿ ಪೈಪೋಟಿಯನ್ನು ಉತ್ತೇಜಿಸಬೇಕು ಹಾಗೂ ಅತಿಗಣ್ಯರ ಹೆಲಿಕಾಪ್ಟರ್ ಖರೀದಿ ಸಂಬಂಧ 70ರ ದಶಕದಲ್ಲಿ ರೂಪಿಸಿದ್ದ ನಿಯಮಗಳಿಗೆ ಬದಲಾವಣೆ ತರಬೇಕು ಎಂಬ ಉದ್ದೇಶದಿಂದ ಹೆಲಿಕಾಪ್ಟರ್ ಹಾರಾಟದ ಮಿತಿ ಇಳಿಸಲು ನಿರ್ಧರಿಸಲಾಗಿತ್ತು
ಈ ಸಂಬಂಧ 2003ರಲ್ಲಿ ಪ್ರಧಾನಿ ಕಚೇರಿ ಪ್ರಮುಖ ಅಧಿಕಾರಿಗಳು ಸಭೆ ನಡೆಸಿದ್ದಾಗಿ ವಾಂಛೂ ತಿಳಿಸಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಹೆಲಿಕಾಪ್ಟರ್ಗಳ ಹಾರಾಟದ ಎತ್ತರತಗ್ಗಿಸುವ ಬಗ್ಗೆ 2005ರ ಮಾರ್ಚ್ನಲ್ಲಿ (ಮನಮೋಹನ್ ಸಿಂಗ್ ಸರ್ಕಾರ) ಕೂಡ ಸಭೆ ನಡೆದಿತ್ತು. ಈ ಸಭೆಯಲ್ಲಿ ನಾರಾಯಣನ್ ಹಾಗೂ ವಾಂಛೂ ಇದ್ದರು. ಇದೇ ಕಾರಣಕ್ಕೆ ಇವರಿಬ್ಬರನ್ನು ಸಿಬಿಐ ಪ್ರಶ್ನೆಗೊಳಪಡಿಸಿದೆ.
‘ಹರಾಜಿನಲ್ಲಿ ಆಗಸ್ಟಾವೆಸ್ಟ್ಲ್ಯಾಂಡ್ ಪಾಲ್ಗೊಳ್ಳುವಂತೆ ಅನುಕೂಲ ಮಾಡಿಕೊಡಲು ಹಾರಾಟ ಮಿತಿ ಇಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು’ ಎನ್ನುವುದು ಸಿಬಿಐ ಆರೋಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.