ADVERTISEMENT

‘ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಕೆಲಸ’

​ಪ್ರಜಾವಾಣಿ ವಾರ್ತೆ
Published 6 ಜೂನ್ 2014, 19:30 IST
Last Updated 6 ಜೂನ್ 2014, 19:30 IST

ನವದೆಹಲಿ: ಆಡಳಿತ ದಕ್ಷತೆ ಹೆಚ್ಚಿಸುವ ಜತೆಗೆ ಕಾರ್ಪೊರೇಟ್‌ ಕಾರ್ಯವೈಖರಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಿ ನೌಕರರೆಲ್ಲರೂ ಬೆಳಿಗ್ಗೆ 8ರಿಂದ ಸಂಜೆ6ರವರೆಗೆಕಾರ್ಯನಿರತರಾಗಬೇಕೆಂಬ ಪ್ರಸ್ತಾವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಡಿಸಿದ್ದಾರೆ.

ಇದೇ ವೇಳೆ ಅವರು ಮಧ್ಯಾಹ್ನದ ಊಟದ ಅವಧಿ ವೇಳೆ ನೌಕರರಿಗೆ ಎರಡು ಗಂಟೆಗಳ ಅವಧಿಯ ಬಿಡುವು ನೀಡು­ವುದು ಸೂಕ್ತ ಎಂದೂ ಅಭಿ­ಪ್ರಾಯ­ಪಟ್ಟಿದ್ದಾರೆ. ಮೋದಿ ಅವರು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿ­ಗಳೊಂದಿಗೆ ಸಭೆ ನಡೆಸಿದ ಮೂರು ದಿನಗಳಲ್ಲೇ ಈ ಪ್ರಸ್ತಾವ ಕೇಳಿಬಂದಿದೆ.

ಇದುವರೆಗೆ ಯಾವ ಪ್ರಧಾನಿ­ಯಿಂ­ದಲೂ ಅಧಿಕಾರಿಗಳಿಗೆ ಇಂತಹ ನಿರ್ದೇಶನ ಬಂದಿರಲಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.