ADVERTISEMENT

‘ಮಾಹಿತಿ ಬಹಿರಂಗ: ಭಾರತದ ಜತೆ ಭಿನ್ನಾಭಿಪ್ರಾಯ’

ಸ್ವಿಟ್ಜರ್‌ಲೆಂಡ್‌ ಬ್ಯಾಂಕುಗಳಲ್ಲಿ ಕಪ್ಪುಹಣ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2014, 19:30 IST
Last Updated 28 ಅಕ್ಟೋಬರ್ 2014, 19:30 IST

ವಾಷಿಂಗ್ಟನ್‌ (ಪಿಟಿಐ): ಸ್ವಿಟ್ಜರ್‌ಲೆಂಡ್‌ ಬ್ಯಾಂಕುಗಳಲ್ಲಿ ಕಪ್ಪುಹಣ ಇರಿಸಿರು­ವ­ವರ ಯಾವ್ಯಾವ ಮಾಹಿತಿಗಳನ್ನು ಬಹಿ­ರಂಗಪಡಿಸಬಹುದು ಎಂಬುದಕ್ಕೆ ಸಂಬಂ­ಧಿಸಿ­ದಂತೆ ಭಾರತದೊಂದಿಗೆ ಭಿನ್ನಾಭಿ­ಪ್ರಾಯ­­ಗಳು ಇವೆ ಎಂದು ಸ್ವಿಟ್ಜರ್‌­­ಲೆಂಡ್‌ನ ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಗೋಪ್ಯ ಖಾತೆ ಇಲ್ಲ– ರಾಧಾ ಟಿಂಬ್ಲೊ
ಪಣಜಿ: ಕೇಂದ್ರ ಸರ್ಕಾರವು ಸುಪ್ರೀಂ­ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದ ಪ್ರಕಾರ ಸ್ವಿಸ್‌ ಬ್ಯಾಂಕ್‌ನಲ್ಲಿ ಕಪ್ಪುಹಣ ಇರಿಸಿರುವವರಲ್ಲಿ ಒಬ್ಬರಾದ ಗೋವಾ ಮೂಲದ ಗಣಿ ಉದ್ಯಮಿ ರಾಧಾ ಟಿಂಬ್ಲೊ ಅವರು, ‘ಈ ದೇಶದಲ್ಲಾಗಲೀ ಅಥವಾ ವಿದೇಶದಲ್ಲಾಗಲೀ ನಾನು ಯಾವುದೇ ಗೋಪ್ಯ ಬ್ಯಾಂಕ್‌ ಖಾತೆ ಹೊಂದಿಲ್ಲ’ ಎಂದಿದ್ದಾರೆ.
ಈಗ ಸರ್ಕಾರ ಯಾವ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆಯೋ ಅದು ಈಗಾಗಲೇ ಇತ್ಯರ್ಥವಾಗಿರುವ ಪ್ರಕರಣ ಎಂದೂ ಅವರು ಹೇಳಿದ್ದಾರೆ.

ಆದರೆ ಭಾರತದಲ್ಲಿ ಹೊಸ ಸರ್ಕಾರ ಅಧಿ­ಕಾರಕ್ಕೆ ಬಂದಿರುವುದರಿಂದ ಈ ಭಿನ್ನಾ­ಭಿಪ್ರಾಯಗಳನ್ನು ಬೇಗನೇ ಬಗೆ­ಹರಿಸಿ­ಕೊಳ್ಳಬಹುದು ಎಂದು ಸ್ವಿಟ್ಜರ್‌­ಲೆಂಡ್‌ನ ವಿದೇಶಾಂಗ ಸಚಿವಾಲಯದ ಅಧಿಕಾರಿ ವ್ಯಾಲೆಂಟಿನ್‌ ಜೆಲ್‌ವೆಗರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಸ್ವಿಟ್ಜರ್‌ಲೆಂಡ್‌ನಲ್ಲಿನ ಸದ್ಯದ ಕಾನೂ­­ನಿನ ಪ್ರಕಾರ ತೆರಿಗೆ ಮರೆ­ಮಾಚು­ವುದು ಕ್ರಿಮಿನಲ್‌ ಅಪರಾಧವಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಅಕ್ರಮಗಳಿಗೆ ಸಂಬಂಧಿಸಿದಂತೆ ಯಾವುದೇ ಗೋಪ್ಯತೆ ಎಂಬುದು ಇಲ್ಲ ಎಂದೂ ಹೇಳಿದ್ದಾರೆ.

‘ಬೇರೊಂದು ದೇಶದ ವಿಚಾರಣಾ ಸಂಸ್ಥೆ ಯಾವುದೇ ಮಾಹಿತಿ ಕೇಳಿದರೆ ಅದನ್ನು ತಡ ಮಾಡದೆ ಒದಗಿಸಲಾಗು­ವುದು. ‘ನಿಮ್ಮ ಗ್ರಾಹಕರನ್ನು ತಿಳಿಯಿರಿ’ (ಕೆವೈಸಿ) ನಿಯಮಾವಳಿಯನ್ನು ನಾವು ಕಟ್ಟು­ನಿಟ್ಟಾಗಿ ಪಾಲಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಯಾವುದೇ ಗೋಪ್ಯತೆ ಎಂಬುದು ಇಲ್ಲ’ ಎಂದು ವಿವರಿಸಿದ್ದಾರೆ.

‘ಭಾರತ ಸರ್ಕಾರದೊಂದಿಗೆ ಈವರೆಗೆ ನಾವು ತೆರಿಗೆ ಮರೆಮಾಚುವಿಕೆಗೆ ಸಂಬಂ­ಧಿಸಿ­ದಂತೆ ಸುದೀರ್ಘವಾಗಿ ಚರ್ಚಿಸಿ­ದ್ದೇವೆ. ಆದರೆ ಬೇರ್‍್ಯಾವುದೇ ಅಕ್ರಮಗಳ ಬಗ್ಗೆ ಮಾತುಕತೆ ನಡೆಸಿಲ್ಲ’ ಎಂದೂ ಅವರು ಹೇಳಿದ್ದಾರೆ. ತೆರಿಗೆ ಮರೆಮಾಚುವ ಪ್ರಕರಣ­ಗ­ಳನ್ನು ಜಾಗತಿಕ ಮಾನದಂಡಗಳಿಗೆ ಅನು­ಗುಣವಾಗಿ ಕ್ರಿಮಿನಲ್‌ ಅಪರಾಧವೆಂದು ಪರಿಗಣಿಸುವ ಬಗ್ಗೆ ಸ್ವಿಸ್‌ ಸರ್ಕಾರ ಕೂಡ ಚಿಂತಿಸು­­­ತ್ತಿದೆ ಎಂದು ಇದೇ ಸಂದರ್ಭ­­ದಲ್ಲಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.