ನವದೆಹಲಿ: ಅಂಚೆ ಇಲಾಖೆಯು ಇನ್ನು ಮುಂದೆ ಅಂಚೆ ಚೀಟಿಗಳಲ್ಲಿ ಸಾರ್ವಜನಿಕರ ಆಯ್ಕೆಯ ವೈಯಕ್ತಿಕ ಚಿತ್ರಗಳ ಮುದ್ರಿಸಿಕೊಡಲು ನಿರ್ಧರಿಸಿದೆ.
ಜನರಿಗೆ ಮತ್ತಷ್ಟು ಹತ್ತಿರವಾಗಲು ಅಂಚೆ ಇಲಾಖೆಯು ಈ ನೂತನ ಯೋಜನೆಯನ್ನು ರೂಪಿಸಿದೆ. ಇದರಿಂದ ಇಲಾಖೆಯ ಆದಾಯವು ಹೆಚ್ಚಳವಾಗಲಿದೆ ಎಂದು ಅಂಚೆ ಇಲಾಖೆಯ ಕಾರ್ಯದರ್ಶಿ ಎಸ್.ಕೆ ಸಿನ್ಹಾ ತಿಳಿಸಿದ್ದಾರೆ.
* ₹ 300 ರೂಪಾಯಿ ಕೊಟ್ರೆ ಭಾವ ಚಿತ್ರ!
ಗ್ರಾಹಕರು ಅಂಚೆ ಕಚೇರಿಗೆ ತೆರಳಿ 300 ರೂಪಾಯಿ ನೀಡಿದರೆ, ಇಲಾಖೆಯ ಸಿಬ್ಬಂದಿಗಳು ಕೆಲವೇ ನಿಮಿಷಗಳಲ್ಲಿ ಜನರ ಆಯ್ಕೆಯ ಭಾವ ಚಿತ್ರಗಳನ್ನು ಅಂಚೆ ಚೀಟಿಯಲ್ಲಿ ಮುದ್ರಿಸಿಕೊಡುತ್ತಾರೆ. ಒಟ್ಟು 12 ಅಂಚೆ ಚೀಟಿಗಳನ್ನು ಮುದ್ರಿಸಿಕೊಡಲಾಗುವುದು.
* ಯಾವ ಫೋಟೊಗಳನ್ನು ಮುದ್ರಿಸಲು ಅವಕಾಶವಿದೆ?
ವಧು, ವರರ ಭಾವಚಿತ್ರಗಳು, ಹುಟ್ಟು ಹಬ್ಬದ ಚಿತ್ರಗಳು, ಸಭೆ, ಸಮಾರಂಭಗಳು, ಸ್ಮಾರಕಗಳು, ಧಾರ್ಮಿಕ ಕೇಂದ್ರಗಳ ಚಿತ್ರಗಳನ್ನು ಮುದ್ರಿಸಬಹುದು.
* ಫೋಟೊ ಮುದ್ರಿಸಲು ಇಲಾಖೆಗೆ ನೀಡಬೇಕಾದ ದಾಖಲೆಗಳೇನು?
ಆಧಾರ್ ಕಾರ್ಡ್, ಗುರುತಿನ ಚೀಟಿ , ಕಾಯಂ ವಿಳಾಸದ ದಾಖಲೆ ಪತ್ರಗಳನ್ನು ನೀಡಬೇಕು. ಆನ್ಲೈನ್ ಅಥವಾ ಆಫ್ಲೈನ್ನಲ್ಲೂ ಫೋಟೊಗಳನ್ನು ಕಳುಹಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.