ADVERTISEMENT

ಸಿಬಿಐ ಮುಖ್ಯಸ್ಥ ಅಲೋಕ್‌ ವರ್ಮಾ ಮನೆ ಬಳಿ ಬೇಹುಗಾರಿಕೆ?: ನಾಲ್ವರ ಬಂಧನ

ಏಜೆನ್ಸೀಸ್
Published 25 ಅಕ್ಟೋಬರ್ 2018, 6:47 IST
Last Updated 25 ಅಕ್ಟೋಬರ್ 2018, 6:47 IST
   

ನವದೆಹಲಿ: ಕಡ್ಡಾಯ ರಜೆಯಲ್ಲಿರುವ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರ ನಿವಾಸದ ಬಳಿ ಕಾರಿನಲ್ಲಿ ಕುಳಿತುಅನುಮಾನ ಉಂಟುಮಾಡಿದ ನಾಲ್ವರನ್ನು ಅಲೋಕ್‌ ಅವರ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.

ಬಂಧಿತರು ಅಕ್ಬರ್‌ ರಸ್ತೆಯಲ್ಲಿರುವ ವರ್ಮಾ ಮನೆ ಎದುರು ಕಾರಿನಲ್ಲಿ ಕುಳಿತಿದ್ದರು.ಮೂಲಗಳ ಪ್ರಕಾರ ಈ ನಾಲ್ವರೂ ಗುಪ್ತಚರ ಇಲಾಖೆ ಅಧಿಕಾರಿಗಳು ಎನ್ನಲಾಗಿದ್ದು, ಅಲೋಕ್‌ ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು ಎಂದು ತಿಳಿದು ಬಂದಿದೆ.

ವರ್ಮಾ ಅವರು ಸಿಬಿಐ ಮುಖ್ಯಸ್ಥರಾಗುವುದಕ್ಕೂ ಮುನ್ನ ದೆಹಲಿ ಪೊಲೀಸ್‌ ಆಯುಕ್ತರಾಗಿದ್ದರು.ಶಂಕಿತರನ್ನುಬೆಳಿಗ್ಗೆ 7.45ರಲ್ಲಿ ಬಂಧಿಸಲಾಗಿದ್ದು, ಅವರು ತಮ್ಮ ಬಂಧನವನ್ನು ವಿರೋಧಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ವರ್ಮಾ ನಂತರದ ಹಿರಿಯ ಅಧಿಕಾರಿಯಾಗಿರುವ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ವಿರುದ್ಧ ಭ್ರಷ್ಟಾಚಾರ ಆರೋಪದ ಮೇಲೆ ಸಿಬಿಐಯಲ್ಲಿ ಇದೇ 15ರಂದುಎಫ್‌ಐಆರ್‌ ದಾಖಲಾಗಿತ್ತು. ಬಳಿಕ ಅಸ್ತಾನಾ ಮತ್ತು ಅಲೋಕ್‌ ನಡುವಿನ ಶೀತಲ ಸಮರ ಬಯಲಾಗಿತ್ತು. ಇಬ್ಬರೂ ಪರಸ್ಪರರ ವಿರುದ್ಧ ಆರೋಪ ಮಾಡಿಕೊಂಡದ್ದು ಸರ್ಕಾರಕ್ಕೆ ಮುಜುಗರ ತಂದಿತ್ತು.

ಈಒಳಜಗಳ ಸರಿಪಡಿಸಲು ಮುಂದಾದ ಕೇಂದ್ರ ಸರ್ಕಾರ, ಅಲೋಕ್‌ ಮತ್ತು ಅಸ್ತಾನಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.