ADVERTISEMENT

45 ಸಚಿವರ ಸಂಭಾವ್ಯ ಪಟ್ಟಿ: ರಾಜ್ಯದ ಮೂವರಿಗೆ ಮಂತ್ರಿ ಯೋಗ

​ಪ್ರಜಾವಾಣಿ ವಾರ್ತೆ
Published 26 ಮೇ 2014, 11:38 IST
Last Updated 26 ಮೇ 2014, 11:38 IST

ನವದೆಹಲಿ: ನರೇಂದ್ರ ಮೋದಿ ಪ್ರಮಾಣ ವಚನಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೆ ಕ್ಯಾಬಿನೆಟ್‌ ಸಚಿವರ ಪಟ್ಟಿ ಅಂತಿಮಗೊಂಡಿದ್ದು ರಾಜ್ಯದ ಮೂವರಿಗೆ ಮಂತ್ರಿಯೋಗ ಸಿಗಲಿದೆ ಎಂದು ಬಿಜೆಪಿಯ ಅಧಿಕೃತ ಮೂಲಗಳು ತಿಳಿಸಿವೆ.

ರಾಜ್ಯದಿಂದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಅನಂತ್‌ಕುಮಾರ್‌ ಮತ್ತು ಸಿದ್ದೇಶ್ವರ ಮಂತ್ರಿಗಳಾಗಲಿದ್ದಾರೆ. ಕನಿಷ್ಠ ಸಂಪುಟ ಗರಿಷ್ಠ ಆಡಳಿತಕ್ಕೆ ಒತ್ತು ನೀಡುವ ಸಲುವಾಗಿ 45 ಸಚಿವರ ಪಟ್ಟಿ ಸಿದ್ಧವಾಗಿದೆ.

ಕ್ಯಾಬಿನೆಟ್‌ ಸಚಿವರ ಪಟ್ಟಿ: ರಾಜನಾಥ್‌ ಸಿಂಗ್‌, ಅರುಣ್‌ ಜೇಟ್ಲಿ, ಸುಷ್ಮಾ ಸ್ವರಾಜ್‌, ನಿತಿನ್‌ ಗಡ್ಕರಿ, ವೆಂಕಯ್ಯನಾಯ್ಡು, ಡಿ.ವಿ.ಸದಾನಂದಗೌಡ, ರಾಮ್‌ವಿಲಾಸ್‌ ಪಾಸ್ವಾನ್‌, ಗೋಪಿನಾಥ್‌ ಮುಂಡೆ, ಕಲರಾಜ್‌ ಮಿಶ್ರಾ, ಮೇನಕಾ ಗಾಂಧಿ, ಅನಂತ್‌ಕುಮಾರ್‌, ರವಿಶಂಕರ್‌ ಪ್ರಸಾದ್‌, ಅಶೋಕ್‌ ಗಜಪತಿ ರಾಜು, ಅನಂತ್‌ ಘಾಟೆ, ಹರ್ಸಿಮರತ್‌ ಕೌರ್‌ ಬಾದಲ್‌, ನರೇಂದ್ರ ಸಿಂಗ್‌ ತೋಮರ್‌, ಜುಆಲ್‌ ಓರಾಮ್‌, ತಾವರ್‌ ಚಂದ್‌ ಗೆಹ್ಲೋಟ್‌, ಸ್ಮೃತಿ ಇರಾನಿ, ಉಮಾಭಾರತಿ, ನಜ್ಮಾ ಹೆಫ್ತುಲ್ಲಾ, ರಾಧಾಮೋಹನ್‌ ಸಿಂಗ್‌, ಡಾ. ಹರ್ಷವರ್ಧನ.

ರಾಜ್ಯಸಚಿವರು (ಸ್ವತಂತ್ರ): ವಿ.ಕೆ.ಸಿಂಗ್‌, ಸಂತೋಷ್‌ಕುಮಾರ್‌ ಗಂಗವಾರ್, ಶ್ರೀಪಾದ್‌ ನಾಯಕ್‌, ಧರ್ಮೇಂದ್ರ ಪ್ರಧಾನ್‌, ಎಸ್‌. ಸೋನೊವಾಲ್‌, ಪ್ರಕಾಶ್‌ ಜಾವಡೇಕರ್,‌ ಪಿಯೂಶ್‌ ಗೋಯಲ್‌, ಡಾ. ಜಿತೇಂದ್ರ ಸಿಂಗ್‌, ನಿರ್ಮಲಾ ಸೀತಾರಾಮನ್‌, ರಾವ್‌ ಇಂದ್ರಜಿತ್‌ಸಿಂಗ್‌.

ADVERTISEMENT

ರಾಜ್ಯಸಚಿವರು: ಜಿ.ಎಂ.ಸಿದ್ಧೇಶ್ವರ, ಮನೋಜ್‌ ಸಿನ್ಹಾ, ಉಪೇಂದ್ರ ಕುಶ್ವಾಲ್‌, ಪೊನ್‌ ರಾಧಕೃಷ್ಣನ್‌, ಕಿರೆನ್‌ ರಿಜ್ಜು, ಕೃಷ್ಣಪಾಲ್‌ ಗುಜ್ಜಾರ್‌, ಸಂಜೀವ್‌ ಬಲಿಯಾನ್‌, ಎಂ.ಡಿ ವಾಸವ, ವಿಷ್ಣುದೇವ್‌ ಸಾಯ್‌, ಸುದರ್ಶನ್‌ ಭಾಗತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.