ADVERTISEMENT

ನಿತೀಶ್‌ ಕುಮಾರ್‌ ಮೇಲೆ ಚಪ್ಪಲಿ ತೂರಿದ ಯುವಕ

ಯುವಕನನ್ನು ಬಂಧಿಸಿದ ಪೊಲೀಸರು* ಜೆಡಿಯು ಕಾರ್ಯಕರ್ತರಿಂದ ಥಳಿತ

ಪಿಟಿಐ
Published 11 ಅಕ್ಟೋಬರ್ 2018, 13:02 IST
Last Updated 11 ಅಕ್ಟೋಬರ್ 2018, 13:02 IST
ಪಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಪ್ಪಲಿ ತೂರಿದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಜೆಡಿಯು ಕಾರ್ಯಕರ್ತರು–ಪಿಟಿಐ ಚಿತ್ರ
ಪಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಪ್ಪಲಿ ತೂರಿದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಜೆಡಿಯು ಕಾರ್ಯಕರ್ತರು–ಪಿಟಿಐ ಚಿತ್ರ   

ಪಟ್ನಾ: ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತೀಶ್‌ ಕುಮಾರ್‌ ಹಾಗೂ ಪಕ್ಷದ ನಾಯಕರು ಗುರುವಾರ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆ ಮೇಲೆ ಯುವಕನೊಬ್ಬ ಚಪ್ಪಲಿ ತೂರಿದ್ದಾನೆ.

‘ಆದರೆ ಚಪ್ಪಲಿಯು, ವೇದಿಕೆ ಮುಂಭಾಗದಲ್ಲಿಕೂತಿದ್ದಪಕ್ಷದ ಕಾರ್ಯಕರ್ತರ ಮೇಲೆ ಬಿದ್ದಿದೆ. ಇದರಿಂದ ಸಿಟ್ಟಿಗೆದ್ದ ಅವರು, ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತಕ್ಷಣವೇ ಆತನನ್ನುವಶಕ್ಕೆ ಪಡೆದಿದ್ದು,ಔರಾಂಗಾಬಾದ್‌ನ ಚಂದನ್‌ ಎಂದು ಗುರುತಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌ ಜನ್ಮದಿನದ ಅಂಗವಾಗಿ ಪಕ್ಷದ ವತಿಯಿಂದ ‘ಛಾತ್ರಾ ಸಮಾಗಮ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಾರಾಯಣ್‌ಸಿಂಗ್‌ ಜೊತೆಗೆ ನಿತೀಶ್‌ ಪಾಲ್ಗೊಂಡಿದ್ದ ವೇಳೆ ಈ ಘಟನೆ ನಡೆದಿದೆ.

ADVERTISEMENT

‌ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹಲ್ಲೆಗೊಳಗಾದ ಯುವಕ, ‘ಈಗಿರುವ ಮೀಸಲಾತಿ ಪದ್ಧತಿಯಿಂದ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದಲ್ಲಿರುವ ಕೆಲವೇ ವ್ಯಕ್ತಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈ ಸಮುದಾಯದ ಅತ್ಯಂತ ಕಡುಬಡವರಿಗೆ ಯಾವುದೇ ಲಾಭವಾಗುತ್ತಿಲ್ಲ. ಇದರ ವಿರುದ್ಧ ನನ್ನ ಪ್ರತಿಭಟನೆಯನ್ನು ಈ ರೀತಿ ದಾಖಲಿಸಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.