ADVERTISEMENT

ಕಲಬುರ್ಗಿಯಲ್ಲೇ ಧರ್ಮಸಿಂಗ್ ಅಂತ್ಯ ಸಂಸ್ಕಾರ: ಕುಟುಂಬದ ಸದಸ್ಯರ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 13:25 IST
Last Updated 27 ಜುಲೈ 2017, 13:25 IST
ಎನ್.ಧರ್ಮಸಿಂಗ್ ನಿಧನಕ್ಕೆ ಜೇವರ್ಗಿ ತಾಲ್ಲೂಕು ನೆಲೋಗಿ ಗ್ರಾಮಸ್ಥರು ಜೇವರ್ಗಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ನೆಲೋಗಿಯಲ್ಲೇ ಅಂತ್ಯ ಸಂಸ್ಕಾರ ನಡೆಸುವಂತೆ ಪ್ರತಿಭಟನೆ ಮಾಡಿದರು.
ಎನ್.ಧರ್ಮಸಿಂಗ್ ನಿಧನಕ್ಕೆ ಜೇವರ್ಗಿ ತಾಲ್ಲೂಕು ನೆಲೋಗಿ ಗ್ರಾಮಸ್ಥರು ಜೇವರ್ಗಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ನೆಲೋಗಿಯಲ್ಲೇ ಅಂತ್ಯ ಸಂಸ್ಕಾರ ನಡೆಸುವಂತೆ ಪ್ರತಿಭಟನೆ ಮಾಡಿದರು.   

ಕಲಬುರ್ಗಿ: ಇಲ್ಲಿನ ರಿಂಗ್ ರಸ್ತೆಯಲ್ಲಿರುವ, ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರಿಗೆ ಸೇರಿದ ಆರ್ಯನ್ ಶಾಲಾ ಆವರಣದಲ್ಲಿ ಧರ್ಮಸಿಂಗ್ ಅವರ ಅಂತ್ಯ ಸಂಸ್ಕಾರ ನಡೆಸಲು ಕುಟುಂಬದ ಸದಸ್ಯರು ತೀರ್ಮಾನಿಸಿದ್ದಾರೆ.

ಇನ್ನೊಂದೆಡೆ ಜೇವರ್ಗಿ ತಾಲ್ಲೂಕು ನೆಲೋಗಿಯಲ್ಲೇ ಅಂತ್ಯ ಸಂಸ್ಕಾರ ನಡೆಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಹಾಗೂ ಅಲ್ಲಿನ ಮುಖಂಡರು ಪ್ರತಿಭಟನೆ ಮಾಡಿದರು. ನೆಲೋಗಿಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಆ ಬಳಿಕ ಇಲ್ಲಿಯೇ ಅಂತ್ಯ ಸಂಸ್ಕಾರ ನಡೆಸಬೇಕು ಎಂದು ಒತ್ತಾಯಿಸಿದರು.

ಕುಟುಂಬದ ಸದಸ್ಯರ ನಿರ್ಧಾರದಂತೆ ಆರ್ಯನ್ ಶಾಲೆ ಬಳಿಯಲ್ಲೇ ಅಂತ್ಯ ಸಂಸ್ಕಾರ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಸ್ಥಳಕ್ಕೆ ಭೇಟಿ ನೀಡಿದ ಈಶಾನ್ಯ ವಲಯ ಐಜಿಪಿ ಅಲೋಕಕುಮಾರ್ ಹಾಗೂ ಜಿಲ್ಲಾಧಿಕಾರಿ ಉಜ್ವಲಕುಮಾರ್ ಘೋಷ್ ಅವರು ಪರಿಶೀಲನೆ ನಡೆಸಿದರು.

ADVERTISEMENT

ನೆಲೋಗಿ ಗ್ರಾಮಸ್ಥರಿಂದ ಶ್ರದ್ಧಾಂಜಲಿ
ಎನ್.ಧರ್ಮಸಿಂಗ್ ನಿಧನಕ್ಕೆ ಜೇವರ್ಗಿ ತಾಲ್ಲೂಕು ನೆಲೋಗಿ ಗ್ರಾಮಸ್ಥರು ಜೇವರ್ಗಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.

ಇದೇ ವೇಳೆ, ನೆಲೋಗಿಯಲ್ಲೇ ಅಂತ್ಯ ಸಂಸ್ಕಾರ ನಡೆಸುವಂತೆ ಪ್ರತಿಭಟನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.