ADVERTISEMENT

ಗೋಧೂಳಿ ಮುಹೂರ್ತದಲ್ಲಿ ವಿದೇಶಿ ಜೋಡಿ ಮದುವೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಗೋಕರ್ಣದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
ಗೋಕರ್ಣದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ   

ಗೋಕರ್ಣ:  ವಿದೇಶಿ ಜೋಡಿಯೊಂದು, ಇಲ್ಲಿನ ಮಹಾಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಗೋಧೂಳಿ ಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.

ಐರ್ಲೆಂಡ್‌ನ ಯುವಕ ಬ್ರೆಜಸ್ಲಿ ಐರ್ಲಿ ಹಾಗೂ ವಿಯೆಟ್ನಾಂ ನಿವಾಸಿ ಝಾಪರ್‌ ಎಲಿಜಬೆತ್ ಪರಸ್ಪರ ಹಾರ ಬದಲಾಯಿಸಿಕೊಂಡು ಸರಳವಾಗಿ ಮದುವೆಯಾದರು. ಎಲಿಜಬೆತ್‌ ಮಣಿಪುರ ಮೂಲದವರು.

ಪಾಲಕರೊಂದಿಗೆ ಗಣೇಶ ಪೂಜೆ, ಕನ್ಯಾ ಸಂಸ್ಕಾರ ವಿಧಿ ಹಾಗೂ ವರನ ಪೂಜಾವಿಧಿಯನ್ನು ಅವರು ನೆರವೇರಿಸಿದರು. ಸ್ಥಳೀಯ ಪುರೋಹಿತರಾದ ನಾಗರಾಜ ಶಂಕರಲಿಂಗ ಹಾಗೂ ವೆಂಕಟರಮಣ ಧಾರೇಶ್ವರ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿಕೊಟ್ಟರು.

ವಧು ಮತ್ತು ವರನ ಪಾಲಕರು, ಕೆಲ ವಿದೇಶಿ ಗೆಳೆಯರು ಹಾಗೂ ಸಂಬಂಧಿಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.