ADVERTISEMENT

ಬಿಎಚ್‌ಶ್ರೀ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2015, 19:30 IST
Last Updated 24 ಏಪ್ರಿಲ್ 2015, 19:30 IST
ಬಿ.ಎಚ್‌. ಶ್ರೀಧರ ಸಾಹಿತ್ಯ ಪ್ರಶಸ್ತಿಯನ್ನು ಹಿರಿಯ ರಂಗಕರ್ಮಿ ಕೆ.ವಿ. ಅಕ್ಷರ ಅವರಿಗೆ ವಿಮರ್ಶಕ ಟಿ.ಪಿ. ಅಶೋಕ ಪ್ರದಾನ ಮಾಡಿದರು. ಪ್ರಶಸ್ತಿ ಸಮಿತಿ ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ, ಅಧ್ಯಕ್ಷ ಡಾ.ಟಿ. ನಾರಾಯಣ ಭಟ್ಟ, ಪ್ರೊ. ಎಂ.ಜಿ. ಹೆಗಡೆ ಇದ್ದಾರೆ.

ಶಿರಸಿ (ಉತ್ತರ ಕನ್ನಡ): ಹಿರಿಯ ರಂಗಕರ್ಮಿ ಕೆ.ವಿ. ಅಕ್ಷರ ಅವರಿಗೆ ವಿಮರ್ಶಕ ಟಿ.ಪಿ. ಅಶೋಕ ಅವರು ಬಿ.ಎಚ್‌. ಶ್ರೀಧರ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿದರು.

ಬಿ.ಎಚ್‌.ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿಯು ರಜತ ವರ್ಷಾಚರಣೆಯ ಸಂದರ್ಭದಲ್ಲಿ ಬಿಎಚ್‌ಶ್ರೀ ಅವರ ಜನ್ಮದಿನವಾದ ಶುಕ್ರವಾರ (ಇದೇ 24) ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

‘ಸಾಹಿತ್ಯ ಕ್ಷೇತ್ರದಲ್ಲಿ ಪೂರ್ವ ತನ್ನೊಳಗಿನ ಪಶ್ಚಿಮವನ್ನು ಹಾಗೂ ಪಶ್ಚಿಮ ತನ್ನೊಳಗಿನ ಪೂರ್ವವನ್ನು ಕಂಡುಕೊಂಡರೆ ಇವೆರಡಕ್ಕೂ ನೆಲೆ ಸಿಗಲು ಸಾಧ್ಯವಾಗುತ್ತದೆ’ ಎಂದು ಪ್ರಶಸ್ತಿ ಸ್ವೀಕರಿಸಿದ ಕೆ.ವಿ. ಅಕ್ಷರ ಹೇಳಿದರು.

ವಿಮರ್ಶಕ ಆರ್‌.ಡಿ. ಹೆಗಡೆ, ಪ್ರೊ. ಎಚ್‌.ಆರ್‌. ಅಮರನಾಥ ಅವರು ಶ್ರೀಧರ ಕುರಿತು ಮಾತನಾಡಿದರು. ಪ್ರೊ. ಎಂ.ಜಿ. ಹೆಗಡೆ ಅವರು ಅಕ್ಷರರ ಕೃತಿ ಕುರಿತು ಮಾತನಾಡಿದರು. ಲೋಹಿತ್ ಮಹಾಲೆ ಅವರಿಗೆ ಬಿಎಚ್‌ಶ್ರೀ ಶಿಕ್ಷಣ ಪುರಸ್ಕಾರ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.