ADVERTISEMENT

ಬೆಳಗಾವಿ: ಚಿಹ್ನೆ ದೋಷ 3ಕಡೆ ಮತದಾನ 31ಕ್ಕೆ ಮುಂದೂಡಿಕೆ

ಮತಪತ್ರದಲ್ಲಿ ಮುದ್ರಣ ದೋಷ

​ಪ್ರಜಾವಾಣಿ ವಾರ್ತೆ
Published 29 ಮೇ 2015, 7:24 IST
Last Updated 29 ಮೇ 2015, 7:24 IST

ಬೆಳಗಾವಿ: ಜಿಲ್ಲೆ ಸೂಳೇಬಾವಿ ಪಂಚಾಯಿತಿ ಕನಗಾವ್ ಬಿ.ಕೆ. ಗ್ರಾಮದ ಮತಗಟ್ಟೆಯಲ್ಲಿ ಹಾಗೂ ರಾಮದುರ್ಗ ತಾಲ್ಲೂಕು ಹಳೇ ಸೋರಗಲ್ ವ್ಯಾಪ್ತಿ ಮತಗಟ್ಟೆಯೊಂದರಲ್ಲಿನ ಮತಪತ್ರದಲ್ಲಿನ ಮುದ್ರಣ ದೋಷ ಹಾಗೂ ಹುದಲಿ ಗ್ರಾಮ ಪಂಚಾಯಿತಿ ಮತಪತ್ರದಲ್ಲಿ ಅಭ್ಯರ್ಥಿಯೊಬ್ಬರ ಹೆಸರೇ ಇಲ್ಲದೇ ಇದ್ದುದರಿಂದ ಈ ಮೂರು ಕಡೆ ಮೇ 31ಕ್ಕೆ ಮತದಾನವನ್ನು ಮುಂದೂಡಲಾಗಿದೆ.

ಸೂಳೇಬಾವಿ ಪಂಚಾಯಿತಿ ಕನಗಾವ್ ಬಿ.ಕೆ. ಗ್ರಾಮದ ಮತಗಟ್ಟೆಯಲ್ಲಿ ಅಭ್ಯರ್ಥಿಯೊಬ್ಬರಿಗೆ ಟೆಲಿಫೋನ್ ಚಿಹ್ನೆ ನೀಡಲಾಗಿತ್ತು. ಆದರೆ, ಮುದ್ರಣ ದೋಷದಿಂದಾಗಿ ಮತಪತ್ರದಲ್ಲಿ ಟೆಲಿವಿಷನ್ ಮುದ್ರಣವಾಗಿದೆ.

ರಾಮದುರ್ಗ ತಾಲ್ಲೂಕು ಹಳೇ ಸೋರಗಲ್ ವ್ಯಾಪ್ತಿ ಮತಗಟ್ಟೆಯೊಂದರಲ್ಲಿ ಅಭ್ಯರ್ಥಿಯೊಬ್ಬರಿಗೆ ಗ್ಯಾಸ್ ಸಿಲಿಂಡರ್ ಚಿಹ್ನೆ ನೀಡಲಾಗಿತ್ತು. ಆದರೆ, ಮತಪತ್ರದಲ್ಲಿ ಗ್ಯಾಸ್ ಒಲೆ(ಸ್ಟೌ)ಯನ್ನು ಮುದ್ರಿಸಲಾಗಿದೆ. ಇಲ್ಲಯೂ ಮುದ್ರಣ ದೋಷ ಉಂಟಾಗಿದೆ.

ಹುದಲಿ ಗ್ರಾಮ ಪಂಚಾಯ್ತಿಯಲ್ಲಿ ಮತಪತ್ರದಲ್ಲಿ ಅಭ್ಯರ್ಥಿಯೊಬ್ಬರ ಹೆಸರೇ ಇಲ್ಲವಾಗಿದೆ. ಇಲ್ಲಿಯೂ ಮುದ್ರಣ ಷೋಷ ಉಂಟಾಗಿದ್ದು, ಈ ಮೂರು ಕಡೆ ಚುನಾವಣೆಗೆ ಮತದಾನವನ್ನು ಮೇ 31ಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.