ADVERTISEMENT

ಲಿಂಗಾಯತ ಪ್ರತ್ಯೇಕ ಧರ್ಮ: ರಾಜ್ಯದ ಶಿಫಾರಸು ಒಪ್ಪದಿದ್ದರೆ ಉಗ್ರ ಹೋರಾಟ: ಎಸ್.ಎಂ.ಜಾಮದಾರ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 9:21 IST
Last Updated 24 ಮಾರ್ಚ್ 2018, 9:21 IST
ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ
ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ   

ಬೆಂಗಳೂರು: ಪಂಚಾಚಾರ್ಯರು ವೀರಶೈವರೋ, ಲಿಂಗಾಯತರೋ, ದಲಿತರೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹಿಸಿದೆ.

ವೀರಶೈವ ಮಹಾಸಭಾದ ಪ್ರಶ್ನೆಗಳಿಗೆ ಉತ್ತರಿಸಿದ ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ, ‘ವೀರಶೈವ ಮಹಾಸಭಾಕ್ಕೂ ಹಾಗೂ ಲಿಂಗಾಯತರಿಗೂ ಸಂಬಂಧವಿಲ್ಲ. ಕೇಂದ್ರ ಸರ್ಕಾರ ರಾಜ್ಯದ ಶಿಫಾರಸನ್ನು ಒಪ್ಪದಿದ್ದರೆ ಉಗ್ರ ಹೋರಾಟ ನಡೆಸಲಿದ್ದೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ನಾವು ವೀರಶೈವರ ಜತೆ ಕೂಡಿ ಹೋಗುವುದಿಲ್ಲ. ನಾವು ಪಂಚಾಚಾರ್ಯರನ್ನು ಧಿಕ್ಕರಿಸಿದ್ದೇವೆ. ಆದರೆ, ಬಸವ ತತ್ವ ಒಪ್ಪುವವರಿಗೆ ಲಿಂಗಾಯತ ಧರ್ಮದಲ್ಲಿ ಮುಕ್ತ ಅವಕಾಶ ಇದೆ ಎಂದು ಹೇಳಿದರು.

ADVERTISEMENT

ವೀರಶೈವ ಮಹಾಸಭಾದಲ್ಲಿರುವ ಲಿಂಗಾಯತರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಹೊರಬರಬೇಕು. ನಾವು ಹಿಂದೂ ವಿರೋಧಿಗಳಲ್ಲ. ಜೈನರಿಗಿಂತಲೂ ಮಿಗಿಲಾದ ಅಹಿಂಸಾ ಪ್ರತಿಪಾದಕರು ಎಂದರು.

ಇದನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.