ADVERTISEMENT

‘ಮತೀಯವಾದಿಗಳಿಂದ ಸಂವಿಧಾನಕ್ಕೆ ಗಂಡಾಂತರ’

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2015, 20:04 IST
Last Updated 4 ಅಕ್ಟೋಬರ್ 2015, 20:04 IST

ಹೊಸಪೇಟೆ (ಬಳ್ಳಾರಿ ಜಿಲ್ಲೆ):  ‘ಮತೀಯವಾದಿಗಳಿಂದ ಭಾರತದ ಸಂವಿಧಾನಕ್ಕೆ ಗಂಡಾಂತರ ಕಾದಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬೇಕು’ ಎಂದು ವಿಧಾನಪರಿಷತ್‌ ಸದಸ್ಯ ವಿ.ಎಸ್.ಉಗ್ರಪ್ಪ ಎಚ್ಚರಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯದಲ್ಲಿ ಭಾನುವಾರ ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆಯಿಂದ ಆಯೋಜಿಸಿದ್ದ ‘ನಾವು ನಮ್ಮಲ್ಲಿ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಂವಿಧಾನ ಪರಾಮರ್ಶೆಯಾಗಬೇಕು, ಮೀಸಲಾತಿಗೆ ತಿದ್ದುಪಡಿ ತರಬೇಕು ಎಂದು ಈಚೆಗೆ ಹೇಳಿಕೆ ನೀಡಿರುವ ಮೋಹನ್‌ ಭಾಗವತ್‌, ಅಸ್ಪೃಶ್ಯತೆಯನ್ನು ಜೀವಂತವಾಗಿರಿಸಲು ಹೊರಟಿದ್ದಾರೆ. ಸ್ವಾತಂತ್ರ್ಯ ಬಂದು 68 ವರ್ಷವಾದರೂ ಸಂವಿಧಾನದ ಆಶಯ
ಗಳು ಈಡೇರಿಲ್ಲ. ವಿಶ್ವವಿದ್ಯಾಲಯಗಳು, ಕಚೇರಿಗಳು ಮತ್ತು ಸಮಾಜದಲ್ಲಿ ಜಾತಿ ತಾರತಮ್ಯ ಬೇರೂರಿದೆ. ಈ ಸಂದರ್ಭದಲ್ಲಿ ಮೀಸಲಾತಿ ಸೌಲಭ್ಯವನ್ನು ಮುಂದಿಟ್ಟುಕೊಂಡು ಈ ದೇಶದ ಕೋಮುವಾದಿ ಶಕ್ತಿಗಳು ಸಂವಿಧಾನಕ್ಕೆ ದೊಡ್ಡ ಗಂಡಾಂತರ ತರಲಿದ್ದು ಸಂವಿಧಾನದ ಮೂಲ ಆಶಯಗಳ ರಕ್ಷಣೆಗೆ ಹೋರಾಟ ನಡೆಸಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.