ADVERTISEMENT

ಅಮೆರಿಕ ಎಚ್ಚರಿಕೆ ನಡುವೆಯೂ ಮಧ್ಯಮ ಶ್ರೇಣಿಯ ಕ್ಷಿಪಣಿ ಉಡಾವಣೆ ಮಾಡಿದ ಇರಾನ್‌

ಏಜೆನ್ಸೀಸ್
Published 23 ಸೆಪ್ಟೆಂಬರ್ 2017, 7:58 IST
Last Updated 23 ಸೆಪ್ಟೆಂಬರ್ 2017, 7:58 IST
ಸೇನೆಯ ಉನ್ನತ ಮಟ್ಟದ ಪ್ರದರ್ಶನ –ಎಪಿ ಚಿತ್ರ
ಸೇನೆಯ ಉನ್ನತ ಮಟ್ಟದ ಪ್ರದರ್ಶನ –ಎಪಿ ಚಿತ್ರ   

ತೆಹ್ರಾನ್‌: ನಿರಂತರವಾಗಿ ಅಣ್ವಸ್ತ್ರ ಪ್ರಯೋಗಗಳನ್ನು ನಡೆಸುತ್ತಿರುವ ಉತ್ತರ ಕೊರಿಯಾಗೆ ಅಮೆರಿಕ ಎಚ್ಚರಿಕೆ ನೀಡಿರುವ ನಡುವೆಯೇ, ಹೊಸ ಮಧ್ಯಮ ಶ್ರೇಣಿಯ ಕ್ಷಿಪಣಿಯೊಂದರ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಿರುವುದಾಗಿ ಇರಾನ್ ಶನಿವಾರ ಹೇಳಿಕೊಂಡಿದೆ.

ಸದ್ಯ ಪರೀಕ್ಷೆ ನಡೆಸಲಾಗಿರುವ ‘ಖೊರಾಮ್ಶಹರ್’ ಕ್ಷಿಪಣಿಯನ್ನು ಶುಕ್ರವಾರ ನಡೆದ ಸೇನೆಯ ಉನ್ನತ ಮಟ್ಟದ ಪ್ರದರ್ಶನದ ವೇಳೆ ಮೊದಲ ಬಾರಿಗೆ ಪ್ರದರ್ಶಿಸಲಾಗಿತ್ತು. ಇದರ ಚಿತ್ರಗಳನ್ನು ಇರಾನ್‌ ರಾಷ್ಟ್ರೀಯ ಟಿವಿ ವಾಹಿನಿಯಲ್ಲಿ ಪ್ರಕಟಿಸಲಾಗಿದ್ದು, ಕ್ಷಿಪಣಿಯನ್ನು ಹೊತ್ತೊಯ್ದ ವಿಮಾನದ ವಿಡಿಯೊವನ್ನೂ ಪ್ರಸಾರಮಾಡಲಾಗಿದೆ.

ಈ ಬಗ್ಗೆ ಶುಕ್ರವಾರ ಮಾತನಾಡಿದ್ದ ಸೇನೆಯ ಅಧಿಕಾರಿಗಳು ಶೀಘ್ರದಲ್ಲೇ ಕ್ಷಿಪಣಿ ಪ್ರಯೋಗ ನಡೆಸಲಾಗುವುದು ಎಂದಷ್ಟೇ ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.