ADVERTISEMENT

ಅಮೆರಿಕ ಶಾಲೆಯಲ್ಲಿ ಗುಂಡಿನ ಮೊರೆತ: ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 19:30 IST
Last Updated 25 ಅಕ್ಟೋಬರ್ 2014, 19:30 IST

ವಾಷಿಂಗ್ಟನ್‌ (ಪಿಟಿಐ): ಅಮೆರಿಕದ ಶಾಲೆ­ಯೊಂದರಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದೆ. ಕ್ಯಾಂಟೀನ್‌­ನಲ್ಲಿ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ಇನ್ನೊಬ್ಬ ವಿದ್ಯಾರ್ಥಿ ಬಲಿಯಾಗಿದ್ದು, ನಾಲ್ವರಿಗೆ ಗಂಭೀರ ಗಾಯವಾಗಿದೆ.  ದಾಳಿ ನಡೆಸಿದ ವಿದ್ಯಾ­ರ್ಥಿಯೂ ಗುಂಡು ಹಾರಿಸಿ­ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಾಷಿಂಗ್ಟನ್‌ ರಾಜ್ಯದ ಸಿಯಾಟಲ್‌ನ ಉತ್ತರಕ್ಕೆ 55 ಕಿ.ಮೀ. ದೂರದ ಮೇರೀಸ್‌ ವಿಲ್ಲೆ ಪಿಲ್‌ಚೌಕ್‌್ ಪ್ರೌಢಶಾಲೆಯಲ್ಲಿ ಶುಕ್ರವಾರ ಘಟನೆ ನಡೆದಿದೆ. ಇಲ್ಲಿ 2,500 ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ.  ಗುಂಡು ಹಾರಿಸಿದ ವಿದ್ಯಾರ್ಥಿಯನ್ನು ಜೇಲೆನ್‌ ಪ್ರೈಬೆರ್ಗ್‌ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿಯೊಬ್ಬಳ ಜತೆಗಿನ ಪ್ರೇಮ ಸಂಬಂಧದ ಕಾರಣ ಆತ  ಕೋಪಗೊಂಡಿದ್ದ. ಆಕೆಯನ್ನೂ ಆತ ಗಾಯಗೊಳಿಸಿದ್ದಾನೆ ಎಂದು ಗಾಯ­ಗೊಂಡ ಜೆರನ್‌ ವೆಬ್‌ ಹೇಳಿದ್ದಾನೆ. ವಿದ್ಯಾರ್ಥಿ ತನ್ನ ತಂದೆಯ ಬಂದೂಕನ್ನು ದುಷ್ಕೃತ್ಯಕ್ಕೆ ಬಳಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.