ADVERTISEMENT

ಅಮೆರಿಕ:  ಹಿಜಾಬ್ ಧರಿಸಿದ ಮುಸ್ಲಿಂ ಮಹಿಳೆ ಹೊರಹಾಕಿದ ಬ್ಯಾಂಕ್ ಸಿಬ್ಬಂದಿ

ಪಿಟಿಐ
Published 14 ಮೇ 2017, 12:25 IST
Last Updated 14 ಮೇ 2017, 12:25 IST
ಅಮೆರಿಕ:  ಹಿಜಾಬ್ ಧರಿಸಿದ ಮುಸ್ಲಿಂ ಮಹಿಳೆ ಹೊರಹಾಕಿದ ಬ್ಯಾಂಕ್ ಸಿಬ್ಬಂದಿ
ಅಮೆರಿಕ:  ಹಿಜಾಬ್ ಧರಿಸಿದ ಮುಸ್ಲಿಂ ಮಹಿಳೆ ಹೊರಹಾಕಿದ ಬ್ಯಾಂಕ್ ಸಿಬ್ಬಂದಿ   
ನ್ಯೂಯಾರ್ಕ್: ಬ್ಯಾಂಕ್‌ಗೆ ಹಿಜಾಬ್ ಧರಿಸಿ ಬಂದ ಮುಸ್ಲಿಂ ಮಹಿಳೆಯನ್ನು ಬ್ಯಾಂಕಿನಿಂದ ಹೊರಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
 
ಜಮೇಲಾ ಮೊಹಮ್ಮದ್ ಎಂಬ  ಮಹಿಳೆ ವಾಷಿಂಗ್ಟನ್‌ನಲ್ಲಿರುವ ಸೌಂಡ್ ಕ್ರೆಡಿಟ್ ಯೂನಿಯನ್ ಬ್ಯಾಂಕ್‌ಗೆ ಹಿಜಾಬ್ ಧರಿಸಿ ಹೋಗಿದ್ದರು. ಈ ವೇಳೆ ಬ್ಯಾಂಕ್‌ ಸಿಬ್ಬಂದಿ  ಹಿಜಾಬ್ ಧರಿಸಿದ್ದಕ್ಕೆ ಹೊರ ಹಾಕಿದ್ದಾರೆ ಎಂದು  ಆ ನೊಂದ ಮಹಿಳೆ ವಿಡಿಯೊದಲ್ಲಿ ತಿಳಿಸಿದ್ದಾರೆ.   
 
ಶುಕ್ರವಾರ ಪ್ರಾರ್ಥನಾ ದಿನವಾಗಿದ್ದರಿಂದ ಶ್ವೆಟ್ಟರ್ ಹಾಗೂ ಹಿಜಾಬ್ ಧರಿಸಿ ಮಧ್ಯಾಹ್ನ ಬ್ಯಾಂಕ್‌ಗೆ ಹೋಗಿದ್ದೆ. ಆಗ ಅಲ್ಲಿನ ಸಿಬ್ಬಂದಿ ನನಗೆ ಹಿಜಾಬ್ ತೆಗೆಯುವಂತೆ ಹೇಳಿದ್ದಾರೆ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
 
ಬ್ಯಾಂಕ್‌ ನಿಯಮದ ಪ್ರಕಾರ ಸನ್‌ಗ್ಲಾಸ್, ಟೋಪಿ ಧರಿಸಿ ಬ್ಯಾಂಕ್‌ ಒಳಗೆ ಬರುವಂತಿಲ್ಲ. ಆದರೆ ಅಲ್ಲಿಯೇ ಇದ್ದ ಮೂವರು ಟೋಪಿ ಧರಿಸಿದ್ದರು. ಆದರೆ   ಅಲ್ಲಿನ ಸಿಬ್ಬಂದಿ ಅವರಿಗೆ ಯಾವುದೇ ರೀತಿಯ ನಿರ್ಬಂಧ ಹೇರಲಿಲ್ಲ. ನನಗೆ ಮಾತ್ರ ಹಿಜಾಬ್ ತೆಗೆಯುವಂತೆ ಹೇಳಿದ್ದಾರೆ ಎಂದು ಜಮೇಲಾ ಮೊಹಮ್ಮದ್ ತಿಳಿಸಿದ್ದಾರೆ.
 
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ  ಸಂಬಂಧ ಬ್ಯಾಂಕ್ ಅಧಿಕಾರಿಗಳು ಜಮೇಲಾ ಮೊಹಮ್ಮದ್ ಅವರಲ್ಲಿ ಕ್ಷಮೆಯಾಚಿಸಿದ್ದಾರೆ 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.