ADVERTISEMENT

ಆತ್ಮಾಹುತಿ ಬಾಂಬ್‌ ದಾಳಿಗೆ 6 ಬಲಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2015, 19:35 IST
Last Updated 1 ಸೆಪ್ಟೆಂಬರ್ 2015, 19:35 IST

ಇಸ್ಲಾಮಾಬಾದ್‌(ಐಎಎನ್‌ಎಸ್‌): ಪಾಕಿಸ್ತಾನದ ವಾಯವ್ಯ  ಬುಡಕಟ್ಟು ಪ್ರದೇಶ ಖೈಬರ್‌ ಪ್ರಾಂತ್ಯದಲ್ಲಿ ಮಂಗಳ ವಾರ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ  6 ಜನ ಮೃತಪಟ್ಟು 50 ಮಂದಿ ಗಾಯಗೊಂಡಿದ್ದಾರೆ. ಆತ್ಮಾಹುತಿ ದಾಳಿಕೋರ ಜಮ್ರುದ್‌ ನಲ್ಲಿರುವ  ಕಚೇರಿಯೊಂದನ್ನು ಪ್ರವೇಶಿ ಸುವ ವೇಳೆ ಭದ್ರತಾ ಸಿಬ್ಬಂದಿ ಪರಿ ಶೀಲಿಸಲು ಮುಂದಾದರು.

ಆಗ ಆತ ಅಲ್ಲಿಯೇ ಸ್ಫೋಟಿಸಿಕೊಂಡ ಎಂದು ರಾಜಕೀಯ ಮುಖಂಡ ಶಹಾಬ್‌ ಅಲಿ ಷಾ  ಅವರು ಹೇಳಿಕೆ ನೀಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ದಾಳೀಕೋರ ಷಾ ಅವರನ್ನೇ ಗುರಿಯಾಗಿರಿಸಿಕೊಂಡು ದಾಳಿ ಮಾಡಲು ಬಂದಿದ್ದ ಆದರೆ ಅಷ್ಟೊತ್ತಿಗಾಗಲೇ ಆಸ್ಪತ್ರೆಗೆ ಭೇಟಿ ನೀಡುವ ಉದ್ದೇಶದಿಂದ ಅಲ್ಲಿಂದ ಅವರು ಹೊರಟು ಹೋಗಿದ್ದರು.

ಸ್ಫೋಟದ ರಭಸಕ್ಕೆ   ಪೊಲೀಸ್‌ ಸೇರಿದಂತೆ ಇಬ್ಬರು  ಸ್ಥಳದಲ್ಲೇ ಮೃತ ಪಟ್ಟಿದ್ದು ಉಳಿದ ನಾಲ್ಕು ಮಂದಿ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿರು ಎಂದು  ಅಬ್‌ತಕ್   ಸುದ್ದಿವಾಹಿನಿ ವರದಿ ಮಾಡಿದೆ. ದಾಳಿ  ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಕೆಲ ದಿನಗಳ ಹಿಂದೆ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಗೃಹ ಸಚಿವರನ್ನು ಅವರ ಮನೆಯಲ್ಲೇ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಸಾಯಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.