ADVERTISEMENT

ಆಫ್ಗಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್‌ ದಾಳಿಗೆ 23 ಬಲಿ

ಏಜೆನ್ಸೀಸ್
Published 24 ಫೆಬ್ರುವರಿ 2018, 11:48 IST
Last Updated 24 ಫೆಬ್ರುವರಿ 2018, 11:48 IST
ಸ್ಪೋಟ ಸಂಭವಿಸಿದ ಸ್ಥಳವನ್ನು ಸುತ್ತುವರಿದಿರುವ ಭದ್ರತಾ ಸಿಬ್ಬಂದಿ –ರಾಯಿಟರ್ಸ್ ಚಿತ್ರ
ಸ್ಪೋಟ ಸಂಭವಿಸಿದ ಸ್ಥಳವನ್ನು ಸುತ್ತುವರಿದಿರುವ ಭದ್ರತಾ ಸಿಬ್ಬಂದಿ –ರಾಯಿಟರ್ಸ್ ಚಿತ್ರ   

ಕಾಬೂಲ್‌: ಆಫ್ಗಾನಿಸ್ತಾನದಲ್ಲಿ ನಡೆದ ಎರಡು ಪ್ರತ್ಯೇಕ ಆತ್ಮಾಹುತಿ ಬಾಂಬ್‌ ದಾಳಿಗಳಲ್ಲಿ ಕನಿಷ್ಠ 23 ಮಂದಿ ಮೃತಪಟ್ಟು 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಫರಾಹ್‌ ಜಿಲ್ಲೆಯ ಬಾಲಾ ಬುಲುಕ್‌ ಜಿಲ್ಲೆಯ ಸೇನಾ ಶಿಬಿರದ ಮೇಲೆ ತಾಲಿಬಾನ್‌ ಉಗ್ರರು ನಡೆಸಿದ ದಾಳಿಯಲ್ಲಿ 18 ಮಂದಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ದೌಲತ್‌ ವಜೀರ್‌ ತಿಳಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿಕೋರನೊಬ್ಬ ಜನನಿಬಿಡ ಸ್ಥಳದಲ್ಲಿ ತನ್ನನ್ನು ಸ್ಫೋಟಿಸಿಕೊಂಡ್ಡಿದ್ದರಿಂದ ಮೂವರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ನಸ್ತ್ರತ್‌ ರಹಿಮಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.