ADVERTISEMENT

ಇನ್ನಷ್ಟು ದಾಳಿ: ಉಗ್ರರ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2014, 15:17 IST
Last Updated 20 ಡಿಸೆಂಬರ್ 2014, 15:17 IST
ಪಾಕಿಸ್ತಾನದ ಪೇಶಾವರ್ ನಲ್ಲಿ ಶನಿವಾರ ಬೆಳಿಗ್ಗೆ ಮಕ್ಕಳು ಶಾಲೆಗೆ ತೆರಳಿದರು. -ಎಎಫ್ ಪಿ ಚಿತ್ರ
ಪಾಕಿಸ್ತಾನದ ಪೇಶಾವರ್ ನಲ್ಲಿ ಶನಿವಾರ ಬೆಳಿಗ್ಗೆ ಮಕ್ಕಳು ಶಾಲೆಗೆ ತೆರಳಿದರು. -ಎಎಫ್ ಪಿ ಚಿತ್ರ   

ಇಸ್ಲಾಮಾಬಾದ್(ಐಎಎನ್ ಎಸ್): ಪಾಕಿಸ್ತಾನದ ಪೇಶಾವರದ ಸೈನಿಕ ಶಾಲೆ ಮೇಲೆ ಆತ್ಮಹತ್ಯಾ ದಾಳಿ ನಡೆಸಿ 132 ಮಕ್ಕಳನ್ನು ಹತ್ಯೆಗೈದಿದ್ದ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ(ಟಿಟಿಪಿ) ಸಂಘಟನೆ ಇಂಥದ್ದೇ ಮಾದರಿಯ ಇನ್ನಷ್ಟು ದಾಳಿಗಳನ್ನು ನಡೆಸುವುದಾಗಿ ಬೆದರಿಕೆಯೊಡ್ಡಿದೆ.

ಇದಕ್ಕೆ ಸಂಬಂಧಿಸಿದಂತೆ ಟಿಟಿಪಿ ತನ್ನ ವೆಬ್ ಸೈಟ್ ನಲ್ಲಿ ವಿಡಿಯೊ ತುಣುಕೊಂದನ್ನು ಪ್ರಸಾರ ಮಾಡಿದೆ. ಪೇಶಾವರ್ ನ ದಾಳಿಯ ಸೂತ್ರದಾರ ಹಾಗೂ ಟಿಟಿಪಿನ ಸ್ಥಳೀಯ ಕಮಾಂಡರ್ ಉಮರ್ ಮನ್ಸೂರ್ ವಿಡಿಯೊ ದೃಶ್ಯದಲ್ಲಿ, ‘ನಾವು ಸೈನಿಕರು ನಡೆಸುತ್ತಿರುವ ಭಯೋತ್ಪಾದನಾ ನಿಗ್ರಹ ಕ್ರಮಕ್ಕೆ ಬಗ್ಗುವುದಿಲ್ಲ. ಇಂಥಹದ್ದೇ ಮಾದರಿಯ ಇನ್ನಷ್ಟು ದಾಳಿಗಳನ್ನು ನಡೆಸುತ್ತೇವೆ’ ಎಂದು ಬೆದರಿಕೆಯೊಡ್ಡಿದ ಸಂದೇಶವನ್ನು ವಿಡಿಯೊದಲ್ಲಿ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.