ADVERTISEMENT

ಉಗ್ರರಿಗೆ ವಾಟ್ಸ್‌ಆ್ಯಪ್‌ ‘ಗೂಢಲಿಪಿ’ ಸುರಕ್ಷೆ ನೆರವು: ಬ್ರಿಟನ್‌

ಏಜೆನ್ಸೀಸ್
Published 27 ಮಾರ್ಚ್ 2017, 19:35 IST
Last Updated 27 ಮಾರ್ಚ್ 2017, 19:35 IST

ನ್ಯೂಯಾರ್ಕ್‌: ಫೇಸ್‌ಬುಕ್‌ ಒಡೆತನದ ವಾಟ್ಸ್‌ಆ್ಯಪ್‌ನಲ್ಲಿನ ಗೂಢಲಿಪಿ ಸುರಕ್ಷೆ (ಎಂಡ್‌ ಟು ಎಂಡ್‌ ಎನ್‌ಕ್ರಿಪ್ಷನ್‌) ಸೌಲಭ್ಯವು ಭಯೋತ್ಪಾದಕರಿಗೆ ಸುರಕ್ಷಿತ ಸಂವಹನಕ್ಕೆ ನೆರವಾಗುತ್ತಿದೆ ಎಂದು ಬ್ರಿಟನ್‌ನ ಗೃಹ ಕಾರ್ಯದರ್ಶಿ ಅಂಬರ್‌ ರುಡ್‌ ಹೇಳಿದ್ದಾರೆ.

ವಾಟ್ಸ್‌ಆ್ಯಪ್‌ನಂತಹ ಸಂಸ್ಥೆಗಳು ಭಯೋತ್ಪಾದಕರ ಪರಸ್ಪರ ಗೋಪ್ಯ ಸಂವಹನಕ್ಕೆ ಅವಕಾಶ ಒದಗಿಸಬಾರದು. 

ಸಂವಹನದ ಸಂದೇಶಗಳನ್ನು  ಪರಿಶೀಲಿಸುವ ಅವಕಾಶ ಗುಪ್ತಚರ ಸಂಸ್ಥೆಗಳಿಗೆ ದೊರಕುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.