ADVERTISEMENT

ಉತ್ತರ ಕೊರಿಯಾ ಜತೆ ಮಾತುಕತೆಗೆ ಒಲವು

ಏಜೆನ್ಸೀಸ್
Published 17 ಜುಲೈ 2017, 19:30 IST
Last Updated 17 ಜುಲೈ 2017, 19:30 IST

ಸೋಲ್ : ಉತ್ತರ ಕೊರಿಯಾ ಇತ್ತೀಚೆಗೆ ಅಂತರ ಖಂಡ ಕ್ಷಿಪಣಿ ಪರೀಕ್ಷೆ ನಡೆಸಿದ ಬಳಿಕ ಉಭಯ ದೇಶಗಳ ನಡುವಿನ ಬಿಕ್ಕಟ್ಟನ್ನು ಕಡಿಮೆಗೊಳಿಸುವ ಯತ್ನಕ್ಕೆ ದಕ್ಷಿಣ ಕೊರಿಯಾ ಮುಂದಾಗಿದೆ. ಉತ್ತರ ಕೊರಿಯಾ ಸೇನೆ ಜೊತೆ ಮಾತುಕತೆಗೆ ದಕ್ಷಿಣ ಕೊರಿಯಾ ಒಲವು ತೋರಿದೆ.

ಗಡಿಗ್ರಾಮ ಪನ್ಮುಂಜಮ್‌ನಲ್ಲಿ ಇದೇ ಶುಕ್ರವಾರ ಮಾತುಕತೆಗೆ ಆಹ್ವಾನಿಸಿದೆ. ರೆಡ್‌ಕ್ರಾಸ್‌ ಇದೇ ಸ್ಥಳದಲ್ಲಿ ಆಗಸ್ಟ್ 1ರಂದು ಮಾತುಕತೆಗೆ ಉದ್ದೇಶಿಸಿದೆ.

‘ಕತಾರ್ ಮಾಧ್ಯಮಕ್ಕೆ ಕನ್ನ: ಯುಎಇ ಕೈವಾಡ’
ವಾಷಿಂಗ್ಟನ್ (ಎಪಿ):
ಕತಾರ್ ಸರ್ಕಾರದ ಸುದ್ದಿ ವೆಬ್‌ಸೈಟ್‌ ಹ್ಯಾಕ್ (ಕನ್ನ) ಹಿಂದೆ ಸಂಯುಕ್ತ ಅರಬ್ ಒಕ್ಕೂಟ (ಯುಎಇ) ಕೈವಾಡವಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ADVERTISEMENT

ಕತಾರ್ ಹಾಗೂ ಇತರೆ ಅರಬ್ ದೇಶಗಳ ನಡುವೆ ಬಿಕ್ಕಟ್ಟು ಸೃಷ್ಟಿಯಾಗುವಂತಹ ಸುಳ್ಳು ಲೇಖನವನ್ನು  ಯುಎಇ ಪ್ರಕಟಿಸಿತ್ತು ಎಂದು ವರದಿ ಹೇಳಿದೆ.

9/11 ದಾಳಿ ಸಂತ್ರಸ್ತರಲ್ಲಿ ಹೃದಯ ಸಮಸ್ಯೆ
ವಾಷಿಂಗ್ಟನ್ (ಪಿಟಿಐ):
9/11ರಂದು ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯ ವೇಳೆ ಆವರಿಸಿದ್ದ ದೂಳು ಸೇವಿಸಿದವರು ಹಾಗೂ  ಗಾಯಗೊಂಡು ಬದುಕುಳಿದವರಲ್ಲಿ ಅಸ್ತಮಾ, ಉಸಿರಾಟದ ತೊಂದರೆಗಳು ಹಾಗೂ ಹೃದಯಾಘಾತ ಸಮಸ್ಯೆಗಳು ತೀವ್ರವಾಗುವ ಸಾಧ್ಯತೆ ಕಂಡುಬಂದಿದೆ ಎಂದು  ಆರೋಗ್ಯ ಇಲಾಖೆ ನಡೆಸಿದ ಅಧ್ಯಯನವೊಂದು ಹೇಳಿದೆ.

ಎಂಎಚ್‌ 17 ಪತನಕ್ಕೆ  3 ವರ್ಷ: ಸಸಿ ನೆಟ್ಟು ಸ್ಮರಣೆ
ದಿ ಹೇಗ್‌  (ಎಎಫ್‌ಪಿ): 
ಯುದ್ಧಪೀಡಿತ ಉಕ್ರೇನ್‌ನಲ್ಲಿ ಕ್ಷಿಪಣಿ ದಾಳಿಯಿಂದ ಎಂಎಚ್‌17 ವಿಮಾನ ಪತನಗೊಂಡು ಸಾವನ್ನಪ್ಪಿದ ಪ್ರಯಾಣಿಕರ ಸ್ಮರಣಾರ್ಥ ಮೂರನೇ ವರ್ಷಾಚರಣೆಸಂದರ್ಭದಲ್ಲಿ ಅವರ ಸಂಬಂಧಿಗಳು ಸೋಮವಾರ 298 ಸಸಿಗಳನ್ನು ನೆಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.