ADVERTISEMENT

ಉಲ್ಲಂಘಿಸಿದರೆ ವಿವಾಹ

ಜಕಾರ್ತದಲ್ಲಿ ಡೇಟಿಂಗ್‌ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:47 IST
Last Updated 3 ಸೆಪ್ಟೆಂಬರ್ 2015, 19:47 IST

ಜಕಾರ್ತ (ಎಎಫ್‌ಪಿ):  ಇಂಡೊ ನೇಷ್ಯಾದ ಪಶ್ಚಿಮ ಜಾವಾದಲ್ಲಿ ರಾತ್ರಿ 9 ಗಂಟೆಯ ನಂತರ ಪರಸ್ಪರರನ್ನು ಭೇಟಿ ಯಾಗುವ (ಡೇಟಿಂಗ್‌) ಯುವ ಜೋಡಿಗಳಿಗೆ ಕಷ್ಟದ ದಿನಗಳು ಕಾದಿವೆ.

ಅಕ್ಟೋಬರ್‌ 1 ರಿಂದ ಪುರ್ವಾಕರ್ತ ಜಿಲ್ಲೆಯಲ್ಲಿ ಹೊಸ ಕಾನೂನು ಜಾರಿ ಮಾಡಲು ಇಲ್ಲಿನ ಸ್ಥಳೀಯ ಮುಖಂಡ ರೊಬ್ಬರು ಮುಂದಾಗಿದ್ದಾರೆ. ರಾತ್ರಿ 9 ಗಂಟೆ ನಂತರ  ಯುವ ಜೋಡಿ ಮಾತ ನಾಡುವುದಕ್ಕೆ ನಿರ್ಬಂಧ  ಹೇರಲಾ ಗುತ್ತಿದೆ. ಒಂದು ವೇಳೆ ಯುವ ಜೋಡಿ ಭೇಟಿ ಮಾಡಿದರೆ ಅವರನ್ನು ಪಂಚಾ ಯಿತಿ ಸಾಂಸ್ಕೃತಿಕ ಮಂಡಳಿ ಆಪ್ತಸಮಾಲೋಚನೆಗೆ ಒಳಪಡಿಸಿ ಬುದ್ಧಿವಾದ ಹೇಳಲಿದೆ.

ಮೂರು ಬಾರಿ ನಿಯಮ ಉಲ್ಲಂಘಿ ಸುವ ಜೋಡಿಗೆ ಮದುವೆ ಮಾಡುವಂತೆ ಪೋಷಕರಿಗೆ ಮಂಡಳಿ ತಿಳಿಸಲಿದೆ. ರಾತ್ರಿ 9 ರ ನಂತರ ಹೊರ ಹೋಗುವ ಯುವ ಜೋಡಿಗಳ ಮೇಲೆ ಕಣ್ಣಿಡಲು ಸ್ಥಳೀಯ ಗಸ್ತು ವ್ಯವಸ್ಥೆ ಅಲ್ಲದೆ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಸ್ಥಳೀಯ ಮುಖಂಡರೊಬ್ಬರು ಹೇಳಿದ್ದಾರೆ. ಈ ಕಟ್ಟು ನಿಟ್ಟಿನ ನಿಯಮ ಹೇಗೆ ಜಾರಿಯಾಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.