ADVERTISEMENT

ಎಚ್‌ಐವಿ ಕೊಲ್ಲುವ ಕಾಂಡೋಮ್‌!

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

ಮೆಲ್ಬರ್ನ್‌ (ಪಿಟಿಐ): ಎಚ್‌ಐವಿ ವೈರಾಣು­ಗಳನ್ನು ಶೇ 99.9ರಷ್ಟು ನಾಶಪಡಿಸುವ ಸಾಮರ್ಥ್ಯವುಳ್ಳ ಕಾಂಡೋಮ್‌ ಅನ್ನು ಆಸ್ಟ್ರೇಲಿಯಾ ವಿಜ್ಞಾನಿಗಳು ತಯಾರಿಸಿದ್ದಾರೆ.

‘ವಿವಾಜೆಲ್‌’ ಎಂಬ ಕಾಂಡೋಮ್‌ ಗರ್ಭ­ಧರಿಸುವ ಸಾಧ್ಯತೆಯನ್ನು ತಡೆಯುವು­ದಲ್ಲದೆ, ಎಚ್‌ಐವಿ ಹಾಗೂ ಇತರ
ಲೈಂಗಿಕ ಕಾಯಿಲೆ­ಗಳನ್ನು ಹರಡುವ ಅಪಾಯವನ್ನು ನಿಯಂತ್ರಿಸು­ತ್ತದೆ ಎಂದು ಅದನ್ನು ತಯಾರಿಸಿರುವ ಆಸ್ಟ್ರೇಲಿ­ಯಾದ ಜೈವಿಕ ತಂತ್ರಜ್ಞಾನ ಸಂಸ್ಥೆ ಸ್ಟಾರ್‌ಫಾರ್ಮಾ ತಿಳಿಸಿದೆ.

ಈ ಕಾಂಡೋಮ್‌ ಅನ್ನು ಆನ್ಸೆಲ್‌ ಎಂಬ ಕಂಪೆನಿ ವಿನ್ಯಾಸಗೊಳಿಸಿದ್ದು, ಇದಕ್ಕೆ ಆಸ್ಟ್ರೇಲಿ­ಯಾದ ಚಿಕಿತ್ಸಾ ಸರಕು ಆಡಳಿತ (ಟಿಜಿಎ) ಮಾರಾಟ ಅನುಮತಿ ನೀಡಿದೆ. ಈ ಕಾಂಡೋಮ್‌ ತಿಂಗಳ ಒಳಗೆ ಅಲ್ಲಿನ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಎಚ್‌ಐವಿ, ಎಚ್‌ಎಸ್‌ವಿ ಮತ್ತು ಎಚ್‌ಪಿವಿ ವೈರಾಣುಗಳ ಸಾಮರ್ಥ್ಯವನ್ನು ಶೇ 99.9ರಷ್ಟು ನಾಶಗೊಳಿಸಬಲ್ಲದು ಎಂದು ಕಂಪೆನಿ ಹೇಳಿಕೊಂಡಿದೆ.

ಎಚ್‌ಐವಿ ವೈರಾಣು ಕ್ರಿಯಾಶೀಲಗೊಳಿಸುವ ಔಷಧ
ಲಂಡನ್‌ (ಪಿಟಿಐ): ಕ್ಯಾನ್ಸರ್‌ ನಿರೋಧಕ ಔಷಧವೊಂದು ರಕ್ತದಲ್ಲಿ ಗುಪ್ತವಾಗಿರುವ ಎಚ್‌ಐವಿ ಮಟ್ಟವನ್ನು ಸುಲಭವಾಗಿ ಪತ್ತೆ

ಹಚ್ಚಬಲ್ಲ ಮಟ್ಟಕ್ಕೆ ಕ್ರಿಯಾಶೀಲ­ಗೊಳಿಸಬಲ್ಲದು ಎಂದು ಸಂಶೋಧಕರು ಹೇಳಿದ್ದಾರೆ. ಕ್ಯಾನ್ಸರ್‌ ನಿರೋಧಕ ಔಷಧ ರೊಮಿಡ್‌ಪ್ಸಿನ್‌ ಎಚ್ಐವಿ ಸೋಂಕಿರುವ ಕೋಶಗಳಲ್ಲಿ ಅದರ ವೈರಾಣುಗಳ ಉತ್ಪಾದನೆಯನ್ನು ಸಾಮಾನ್ಯ ಮತ್ತು ವೈರಾಣು ಇರುವ ರಕ್ತದಲ್ಲಿ ಸುಲಭವಾಗಿ ಮಾಪನ ಮಾಡುವ ಮಟ್ಟಕ್ಕೆ 2.1 ರಿಂದ 3.9 ಪಟ್ಟು ಹೆಚ್ಚಿಸಬಲ್ಲದು ಎಂದು ಸಂಶೋಧಕರು ತಿಳಿಸಿದ್ದಾರೆ. ಸಂಶೋಧಕರು ಅಧ್ಯಯನಕ್ಕೆ ಒಳಪಡಿಸಿದ ಆರು ರೋಗಿಗಳಲ್ಲಿ ಐವರು ಎಚ್‌ಐವಿ ಪೀಡಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT