ADVERTISEMENT

ಎರಡನೇ ಸುತ್ತಿನ ಯಾನ ಆರಂಭಿಸಿದ ‘ಸೋಲಾರ್‌ ಇಂಪಲ್ಸ್‌ –2’

​ಪ್ರಜಾವಾಣಿ ವಾರ್ತೆ
Published 2 ಮೇ 2016, 19:54 IST
Last Updated 2 ಮೇ 2016, 19:54 IST

ಸ್ಯಾನ್‌ಫ್ರಾನ್ಸಿಸ್ಕೊ (ಎಎಫ್‌ಪಿ): ಸ್ವಚ್ಛ ಇಂಧನ ತಂತ್ರಜ್ಞಾನದ ಬಗ್ಗೆ ಗಮನ ಸೆಳೆಯುವ ಉದ್ದೇಶದೊಂದಿಗೆ ಪ್ರಪಂಚ ಪರ್ಯಟನೆಯನ್ನು ಯಶಸ್ವಿಯಾಗಿ ಪೂರೈಸಿದ್ದ ಸೌರ ಚಾಲಿತ ವಿಮಾನ ‘ಸೋಲಾರ್‌ ಇಂಪಲ್ಸ್‌–2’ ತನ್ನ ಎರಡನೇ ಸುತ್ತಿನ ಸಂಚಾರವನ್ನು ಸೋಮವಾರ ಸಂಜೆ ಆರಂಭಿಸಿದೆ.

ಪೈಲಟ್‌ ಆಂಡ್ರೆ ಬಾರ್ಷ್‌ಬರ್ಗ್‌ ಅವರು ಅಮೆರಿಕದ ಅರಿಜೋನಾದ ಮೊಜಾವಿ ಮರಭೂಮಿಯಿಂದ ಫೀನಿಕ್ಸ್‌ ಗುಡ್‌ಇಯರ್‌ ವಿಮಾನ ನಿಲ್ದಾಣಕ್ಕೆ  16 ಗಂಟೆಗಳ ಯಾನ ಕೈಗೊಂಡರು.

ಹವಾಯಿ ದ್ವೀಪದಿಂದ ಕ್ಯಾಲಿಫೋರ್ನಿಯಾಗೆ ಸಂಚರಿಸಿದ ವೇಳೆ ಸ್ವಿಸ್‌ ಸಾಹಸಿಗ ಬರ್ಟ್ರಂಡ್‌ ಪಿಕ್ಕಾರ್ಡ್‌ ಅವರು ಪೈಲಟ್‌ ಆಗಿ ಕಾರ್ಯನಿರ್ವಹಿಸಿದ್ದರು. ನಂತರ ವಿಮಾನವು ಕ್ಯಾಲಿಫೋರ್ನಿಯಾದಲ್ಲಿ ವಾರಗಳ ಕಾಲ ತಂಗಿತ್ತು.

’ಸೋಲಾರ್‌ ಇಂಪಲ್ಸ್‌–2’ ವಿಮಾನದ ರೆಕ್ಕೆಗಳಲ್ಲಿ ಅಳವಡಿಸಲಾಗಿರುವ 17ಸಾವಿರ ಸೋಲಾರ್‌ ಸೆಲ್‌ಗಳು ವಿಮಾನ ಹಾರಾಟ ವೇಳೆ ಸೌರಶಕ್ತಿಯನ್ನು ತುಂಬಿಕೊಂಡು ಬಿಸಿಲು ಇಲ್ಲದ ವೇಳೆ ಇಂಧನವಾಗಿ ಕೆಲಸ ನಿರ್ವಹಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.