ADVERTISEMENT

ಕೇಟ್‌ ದಂಪತಿಗೆ ಗಂಡುಮಗು

ಪಿಟಿಐ
Published 23 ಏಪ್ರಿಲ್ 2018, 19:37 IST
Last Updated 23 ಏಪ್ರಿಲ್ 2018, 19:37 IST
ರಾಜಕುಮಾರ ವಿಲಿಯಮ್ಸ್‌ ಅವರ ಪತ್ನಿ ಕೇಟ್ ಮಿಡ್ಲ್‌ಟನ್
ರಾಜಕುಮಾರ ವಿಲಿಯಮ್ಸ್‌ ಅವರ ಪತ್ನಿ ಕೇಟ್ ಮಿಡ್ಲ್‌ಟನ್   

ಲಂಡನ್: ರಾಜಕುಮಾರ ವಿಲಿಯಮ್ಸ್‌ ಅವರ ಪತ್ನಿ ಕೇಟ್ ಮಿಡ್ಲ್‌ಟನ್ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಬ್ರಿಟನ್ ಕಾಲಮಾನ ಬೆಳಿಗ್ಗೆ 11.01ಕ್ಕೆ ಮಗು ಜನಿಸಿದೆ. ಮಗು 3.80 ಕೆ.ಜಿ ಇದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಕಿಂಗ್‌ಸ್ಟನ್ ಅರಮನೆಯ ಪ್ರಕಟಣೆ ತಿಳಿಸಿದೆ. ಇದು ವಿಲಿಯಮ್ಸ್‌ ದಂಪತಿಯ ಮೂರನೇ ಮಗು.

ಕೇಟ್ ಮಿಡ್ಲ್‌ಟನ್ ಅವರನ್ನು ಸೋಮವಾರ ಮುಂಜಾನೆ ಇಲ್ಲಿನ ಸೇಂಟ್‌ ಮೇರಿಸ್ ಆಸ್ಪತ್ರೆ‌ಗೆ ದಾಖಲಿಸಲಾಗಿತ್ತು. ಕೇಟ್ ಮೊದಲ ಎರಡು ಮಗುವಿಗೂ ಇದೇ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು.

ADVERTISEMENT

2013ರಲ್ಲಿ ಮೊದಲ ಮಗ ಜಾರ್ಜ್‌ ಹಾಗೂ 2015ರಲ್ಲಿ ಮಗಳು ಚಾರ್ಲೆಟ್ ಜನಿಸಿದ್ದಳು. ಈ ಮೂರನೇ ಮಗುವಿಗೆ ಆಥರ್‌, ಆಲ್ಬರ್ಟ್‌, ಫೆಡ್ರಿಕ್‌, ಜೇಮ್ಸ್‌, ಫಿಲಿಫ್‌ ಎಂಬ ಹೆಸರುಗಳಲ್ಲಿ ಯಾವುದಾದರೊಂದು ಆಯ್ಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.